ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರಧಾನಿ ನರೇಂದ್ರ ಮೋದಿ #PM Narendra Modi ಅವರ ಭಾಷಣವನ್ನು ತಿರುಚಿದ ವೀಡಿಯೋವನ್ನು ಪ್ರಕಟ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ #Priyanka Kharge ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ದೂರು ದಾಖಲಿಸಿದ್ದು, ಕ್ರಮ ಕೈಗೊಳ್ಳುವಂತೆ ಕೋರಿದೆ.
ಕಿಸಾನ್ ಸಮ್ಮಾನ್ ಯೋಜನೆಗೆ ಸಂಬಂಧಿಸಿದ ಹಣವನ್ನು ರಾಜ್ಯ ಸರ್ಕಾರ ಕಡಿತ ಮಾಡಿದ್ದನ್ನು ಉಲ್ಲೇಖಿಸಿ ಮೋದಿ ಭಾಷಣ ಮಾಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಆದರೆ ಭಾಷಣದ ವಿಡಿಯೋವನ್ನು ತಮಗೆ ಬೇಕಾದಷ್ಟು ಮಾತ್ರ ಎಡಿಟ್ ಮಾಡಿ ಪ್ರಿಯಾಂಕ್ ಖರ್ಗೆ ಪೋಸ್ಟ್ ಮಾಡಿದ್ದಾರೆ ಎಂದು ಬಿಜೆಪಿ ದೂರಿದೆ.
ಕನ್ನಡಿಗರು ಪಾಪ ಮಾಡಿದವರು ಎನ್ನುವ ಪ್ರಧಾನಿ ಮೋದಿಯವರೇ, ಕನ್ನಡಿಗರನ್ನು ಕಂಡರೆ ನಿಮಗೆ ಯಾಕಿಷ್ಟು ದ್ವೇಷ? ನಮ್ಮದೇ ದೇಶದವರನ್ನು ಅವಮಾನಿಸುವುದು ಮೋದಿಯವರ ಖಯಾಲಿಯೇ? ಹಿಂದೆ ಕೇರಳವನ್ನು ಸೊಮಾಲಿಯಕ್ಕೆ ಹೋಲಿಸಿದ್ದಿರಿ, ಈಗ ಕನ್ನಡಿಗರನ್ನು ಪಾಪಿಷ್ಠರು ಎಂದಿದ್ದೀರಿ. ಕನ್ನಡಿಗರು ಯಾವ ಪಾಪ ಮಾಡಿದ್ದರು ಸ್ವಾಮಿ? ಭ್ರಷ್ಟ ಬಿಜೆಪಿಯನ್ನು ತಿರಸ್ಕರಿಸಿದ್ದು ಪಾಪವೇ? ಶೇ.40ರಷ್ಟು ಕಮಿಷನ್ ಸರ್ಕಾರವನ್ನು ಒದ್ದೋಡಿಸಿದ್ದು ಪಾಪವೇ? 25 ಬಿಜೆಪಿ ಸಂಸದರು ನಿಷ್ಕ್ರಿಯರಾಗಿದ್ದು ಕನ್ನಡಿಗರ ಯಾವ ಪಾಪಕ್ಕೆ ಎಂದು ಪ್ರಶ್ನಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post