ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಕಂಬಳ ಆಯೋಜನೆಗೊಂಡಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಕೌಂಟ್ ಡೌನ್ ಆರಂಭವಾಗಿದೆ.
ನಗರದ ಪ್ಯಾಲೇಸ್ ಮೈದಾನದಲ್ಲಿ ನ.25 ಹಾಗೂ 26ರಂದು ಕರಾವಳಿಯ ಕಂಬಳ ನಡೆಯಲಿದ್ದು, ಇದಕ್ಕಾಗಿ ಸರ್ವ ಸಿದ್ದತೆ ನಡೆದಿದೆ. ಕಾರ್ಯಕ್ರಮದ ಮುಖ್ಯ ವೇದಿಕೆಗೆ ಪುನೀತ್ ರಾಜಕುಮಾರ್ Puneeth Rajkumar ಎಂದು ಹೆಸರಿಡಲಾಗಿದೆ.
ಕಂಬಳದಲ್ಲಿ ಕರಾವಳಿಯ 200 ಜೋಡಿ ಕೋಣಗಳು ಪಾಲ್ಗೊಳ್ಳಿದ್ದು, ಹಾಸನದಿಂದ ದೊಡ್ಡ ಮೆರವಣಿಗೆ ಮೂಲಕ ಬೆಂಗಳೂರಿಗೆ ಅವುಗಳನ್ನು ಕರೆ ತರಲಾಗುತ್ತದೆ.
Also read: ಆಸ್ತಿ ತೆರಿಗೆ ಪಾವತಿಸದ 6 ಲಕ್ಷ ಮಾಲೀಕರಿಗೆ ಬಿಬಿಎಂಪಿ ಬಿಗ್ ಶಾಕ್
ಕೋಣಗಳಿಗೆ ನೀರು ಬೈಹುಲ್ಲು, ಹುರಳಿ ಎಲ್ಲವನ್ನೂ ಕರಾವಳಿಯಿಂದಲೇ ತರಿಸಲಾಗಿದೆ. ಕೋಣಗಳಿಗೆ ಆರೋಗ್ಯ ಸಮಸ್ಯೆ ಉಂಟಾಗದೇ ಇರಲು ಈ ಕ್ರಮ ಕೈಗೊಳ್ಳಲಾಗಿದೆ.
ಗೆದ್ದ ಕಂಬಳದ ಕೋಣಗಳಿಗೆ 16 ಗ್ರಾಂ ಬಂಗಾರ ಹಾಗೂ ಒಂದು ಲಕ್ಷ ರೂ. ಬಹುಮಾನ ನೀಡಲಾಗುತ್ತಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















