ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಾನೂನು ಕಾಲೇಜಿನ ಸಹ ಪ್ರಾಧ್ಯಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಶಾಸ್ತ್ರೀಯ ನೃತ್ಯ ಭರತನಾಟ್ಯ ಪ್ರವೀಣೆ ವಿದೂಷಿ ವಾಸವಿ ಅವರಿಗೆ ಕಮಲಾಂಜಲಿ ಅವಾರ್ಡ್ ಅನ್ನು ಪ್ರದಾನ ಮಾಡಿ ಗೌರವಿಸಲಾಯಿತು.
ಈ ಕಾರ್ಯಕ್ರಮವನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್’ನಲ್ಲಿ ಆಯೋಜಿಸಲಾಗಿತ್ತು. ವಿದುಷಿ ಎಲ್.ಎಸ್. ವಾಸವಿ ಅವರನ್ನು ಒಂದೇ ನಾಣ್ಯದ ಎರಡು ಮುಖಗಳಿರುವ ರೀತಿ ಅವರ ಉತ್ತಮ ಮತ್ತು ದಕ್ಷ ಬೋಧನೆ ಹಾಗೂ ಶಾಸ್ತ್ರೀಯ ನೃತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶೇಷ ಸೇವೆಯನ್ನು ಗುರುತಿಸಿ ಕಾಮಲಾಂಜಿನಿ ಪ್ರಶಸ್ತಿ ನೀಡಿ ಗೌರವಿಸಿರುವ ಬಗ್ಗೆ ಅವೋಪ ಅಧ್ಯಕ್ಷರು ಶ್ಲಾಘಿಸಿದರು.
ನೃತ್ಯ ವೈಭವ ಎಂಬ ಕಾರ್ಯಕ್ರಮದಲ್ಲಿ ವಾಸವಿ ಅವರು ನೃತ್ಯ ಪ್ರದರ್ಶನವನ್ನು ಅಮೋಘವಾಗಿ ಪ್ರದರ್ಶಿಸಿದರು. ಅವರ ಕಲಾಪ್ರಿಯತೆ ಹಾಗೂ ಶಾಸ್ತ್ರೀಯ ನೃತ್ಯವನ್ನು ಉತ್ತೇಜಿಸುವ ಕಾರ್ಯವನ್ನು ಅಭಿಮಾನಿಗಳ ಮುಂದಿಡಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕರ್ನಾಟಕ ಆರ್ಯ ವೈಶ್ಯ ಮಹಾಸಭಾದ ಅಧ್ಯಕ್ಷರಾದ ಆರ್.ಪಿ. ರವಿಶಂಕರ್ ಮಾತನಾಡುತ್ತಾ, ಈ ಪ್ರಶಸ್ತಿಗೆ ಭಾಜನವಾಗಿರುವ ಶ್ರೀಮತಿ ವಾಸವಿಯವರ ಉತ್ತಮ ಭೋಧನೆ ಮತ್ತು ಕಲಾ ಪ್ರತಿಭೆಗೆ ಆಯ್ಕೆ ಮಾಡಿರುವುದು ಶ್ಲಾಘನೀಯವಾಗಿದೆಯೆಂದು ತಿಳಿಸಿ ಸಂತೋಷ ವ್ಯಕ್ತಪಡಿಸಿದರು.
ಈ ಗೌರವಯುಕ್ತ ಸಮಾರಂಭವು ವಿದೂಷಿ ವಾಸವಿ ಅವರ ಭೋಧನಾ ಪ್ರತಿಭೆ ಕಲಾ ವೃದ್ಧಿಗೆ ನೀಡಿದ ಸೇವೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಅವರ ಕಾರ್ಯವನ್ನು ಸ್ಮರಿಸುವಂತೆ ನಡೆಯಿತು. ಗಣ್ಯರು ಮತ್ತು ಕಲಾ ಪ್ರಿಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ವಿದುಷಿ ವಾಸವಿ ಅವರಿಂದ ನೃತ್ಯ ವೈಭವ ಭರತನಾಟ್ಯವನ್ನು ಪ್ರದರ್ಶಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post