ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕೆಲವು ಅಂಧಾಭಿಮಾನಿಗಳಿಂದ ತಮಗೆ ಜೀವ ಬೆದರಿಕೆ ಕರೆ ಬಂದಿದೆ ಎಂದು ಬಿಗ್ ಬಾಸ್ ವಿನ್ನರ್, ನಟ ಪ್ರಥಮ್ #Pratham ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಕುರಿತಂತೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಥಮ್ ಅವರು ದೂರು ದಾಖಲಿಸಿದ್ದು, ಕಿಡಿಗೇಡಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಅಂಧಾಭಿಮಾನಿಗಳಿಂದ ನಿರಂತರ ಕರೆಗಳು ಮಾಡಿ ಬೆದರಿಕೆ ಹಾಕಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿ ದೂರು ನೀಡಿದ್ದಾರೆ. ದೂರು ನೀಡಿರುವ ವಿಚಾರವನ್ನು ಪ್ರಥಮ್ ಅವರು ಸೋಷಿಯಲ್ ಮೀಡಿಯಾದಲ್ಲಿ ಪ್ರಥಮ್ ಮಾಹಿತಿ ಹಂಚಿಕೊಂಡಿದ್ದಾರೆ.
Also read: ಸಾಲು ಸಾಲು ಆರೋಪ | ನಟ ದರ್ಶನ್ ವಿರುದ್ಧ ರೌಡಿ ಶೀಟರ್ ಓಪನ್…?
ಪ್ರಥಮ್ ಹೇಳಿರುವುದೇನು?
ಜೀವನ ಬಹಳ ದೊಡ್ಡದು, ಯಾರಿಗೋಸ್ಕರವೋ ನೀವು ಅದನ್ನು ಹಾಳು ಮಾಡಿಕೊಳ್ಳಬೇಡಿ. ನಾನು ತುಂಬಾ ಶಾಂತಿಯಿಂದಲೇ ಇದ್ದೆ. ನೀವು ಅತಿಯಾಗಿ ನಮ್ಮ ಕರ್ನಾಟಕ ಅಳಿಯ ತಂಡದ ಆಫೀಸ್ ನಂಬರ್’ಗೆ ಕಾಲ್ ಮಾಡಿ ಬೆದರಿಕೆ ಹಾಕುತ್ತಲೇ ಬಂದಿದ್ದೀರಾ. ಇನ್ಮೇಲೆ ನನಗೆ ಬರುವ ಕಾಲ್ ಮತ್ತು ಮೆಸೇಜ್ ಸೋಷಿಯಲ್ ಮೀಡಿಯಾ ವಾರ್ನಿಂಗ್ಸ್ ಎಲ್ಲವೂ ಪೊಲೀಸರೇ ನೋಡಿಕೊಳ್ತಾರೆ ಎಂದವರು ಬರೆದುಕೊಂಡಿದ್ದಾರೆ.
ಬದುಕು ಸುಂದರವಾದದ್ದು, ಅಂಧಾಭಿಮಾನಿಗಳೇ ನಿಮ್ಮ ತಂದೆ ತಾಯಿಗೆ ಮೀಸಲಿಡಿ. ಯಾರಿಗೋಸ್ಕರವೋ ಹಾಳುಮಾಡಿಕೊಳ್ಳಬೇಡಿ. ಕನ್ನಡಕ್ಕಾಗಿ, ಕಾವೇರಿಗಾಗಿ, ಸಂಸ್ಕೃತಿ ಉಳಿಸೋಕೆ ಬೇಕಾದರೆ ಜೈಲಿಗೆ ಹೋಗಿ. ಆದರೆ ಯಾರಿಗೋಸ್ಕರವೋ ಲೈಫು ಹಾಳುಮಾಡಿಕೊಳ್ಳಬೇಡಿ ಎಂದು ತಿಳಿ ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post