ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ನಟ ಸೃಜನ್ ಲೋಕೇಶ್ ಮತ್ತು ಪ್ರೇಮ್ ಜೊತೆ ಈಗಾಗಲೇ ಐಟಂ ಸಾಂಗ್‌ಗಳಲ್ಲಿ ಹೆಜ್ಜೆ ಹಾಕಿರುವ ಮಾದಕ ನಟಿ ಸನ್ನಿ ಲಿಯೋನ್ ಈಗ ಮತ್ತೆ ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳಲು ತಯಾರಾಗಿದ್ದು, ಇದಕ್ಕಾಗಿ ಸನ್ನಿ ಲಿಯೋನ್ 50 ಲಕ್ಷದಷ್ಟು ಸಂಭಾವನೆ ನೀಡಲಾಗುತ್ತಿದೆ ಎನ್ನಲಾಗಿದೆ.
ಕನಕಪುರ ಶ್ರೀನಿವಾಸ್ ನಿರ್ಮಾಣ ಮಾಡುತ್ತಿರುವ ಕಾಟನ್ ಪೇಟೆ ಗೇಟ್ ಸಿನಿಮಾದಲ್ಲಿ ಸನ್ನಿ ಲಿಯೋನ್ ಹೆಜ್ಜೆ ಹಾಕಲಿದ್ದು, ಈ ಚಿತ್ರ ತೆಲುಗಿನಲ್ಲಿ ಸೀತಣ್ಣ ಪೇಟೆ ಗೇಟ್ ಆಗಿ ನಿರ್ಮಿಸಲಾಗುತ್ತಿದೆ. ಚಿತ್ರದ ಐಟಂ ಸಾಂಗ್‌ನಲ್ಲಿ ಶ್ರೀನಿವಾಸ್ ಜೊತೆ ಸನ್ನಿ ನೃತ್ಯ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಮೂರು ದಿನಗಳ ಕಾಲ ಸಿನಿಮಾ ಹಾಡಿನ ಚಿತ್ರೀಕರಣ ನಡೆಯಲಿದ್ದು, ಇದೇ ತಿಂಗಳು ಕೊನೆಯ ವಾರದಲ್ಲಿ ಹಾಡಿನ ಚಿತ್ರೀಕರಣ ಮಾಡಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post