ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸುಮಾರು 50 ವರ್ಷಗಳ ಕಾಲ ಕನ್ನಡ ಸೇರಿ ಐದು ಭಾಷೆಗಳ ಚಿತ್ರರಂಗದಲ್ಲಿ ರಾಣಿಯಂತೆ ಮೆರೆದ ಹಿರಿಯ ನಟಿ ಲೀಲಾವತಿ (85) Actress Leelavathi ಇಂದು ವಿಧಿವಶರಾಗಿದ್ದಾರೆ.
ವಯೋಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರನ್ನು ಲೋ ಬಿಪಿ ಹಿನ್ನೆಲೆಯಲ್ಲಿ ಇಂದು ನೆಲಮಂಗಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಸಂಜೆ ಕೊನೆಯುಸಿರೆಳೆದ್ದಾರೆ.
ಸುಮಾರು 650ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಲೀಲಾವತಿ ಕನ್ನಡದಲ್ಲೇ 400ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿರುವುದು ವಿಶೇಷ.
ಲೀಲಾವತಿ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಸುಮಾರು 50 ವರ್ಷಗಳಲ್ಲಿ ಅಂದಾಜು ಮೂರು ದಶಕಕ್ಕೂ ಅಧಿಕ ಕಾಲ ಉತ್ತುಂಗದಲ್ಲಿದ್ದರು.
Also read: ಈ ಎರಡು ಪ್ರಮುಖ ಬೇಡಿಕೆ ಈಡೇರಿಸದಿದ್ದರೆ ಕುವೆಂಪು ವಿವಿ ಬಂದ್ ಎಚ್ಚರಿಕೆ
70-80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಆಳವಾಗಿ ಬೇರು ಬಿಟ್ಟು, ತಮ್ಮದೇ ಆದ ಸಾಮರ್ಥ್ಯ ಹಾಗೂ ಹಿಡಿತ ಸಾಧಿಸಿದ್ದ ಲೀಲಾವತಿ ಅವರು ಅತ್ಯಂತ ಬೇಡಿಕೆಯ ನಾಯಕ ನಟಿಯಾಗಿದ್ದರು.
ಬಹಳಷ್ಟು ವರ್ಷಗಳ ಕಾಲ ಚಿತ್ರಕ್ಕೆ ನಾಯಕ ನಟನ ಕಾಲ್ ಶೀಟ್ ಬುಕ್ ಮಾಡುವ ಮುನ್ನ ಲೀಲಾವತಿ ಅವರ ದಿನಾಂಕ ಪಡೆದು ಆನಂತರ ಮಾಡಲಾಗುತ್ತಿತ್ತು.
ಪ್ರಮುಖ ವಿಚಾರವೆಂದರೆ, ಸುಮಾರು ವರ್ಷಗಳ ಕಾಲ ಚಿತ್ರದ ನಾಯಕ ನಟರು ಪಡೆಯುವುದಕ್ಕಿಂತಲೂ ಅಧಿಕ ಸಂಭಾವನೆಯನ್ನು ಲೀಲಾವತಿ ಪಡೆಯುತ್ತಿದ್ದರು. ಅಷ್ಟರ ಮಟ್ಟಿಗೆ ಚಿತ್ರರಂಗದಲ್ಲಿ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದರು.
ರಾಣಿ ಹೊನ್ನಮ್ಮ ಚಿತ್ರದ ಯಶಸ್ಸಿನ ನಂತರ ರಾಜ್ ಕುಮಾರ್ ಮತ್ತು ಲೀಲಾವತಿ ಅವರ ಜೋಡಿ ಜನಪ್ರಿಯವಾಯಿತು. ಸಂತ ತುಕಾರಾಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ, ಮನ ಮೆಚ್ಚಿದ ಮಡದಿ ಹೀಗೆ ಹಲವಾರು ಚಿತ್ರಗಳ ನಾಯಕಿಯಾದರು. ಕೆಲಚಿತ್ರಗಳಲ್ಲಿ ನಾಯಕನಟರಿಗಿಂತ ಹೆಚ್ಚಿನ ಸಂಭಾವನೆ ಪಡೆಯುವ ನಾಯಕಿಯಾಗಿ ಗುರುತಿಸಿಕೊಂಡಿದ್ದರು.
70ರ ದಶಕದ ಬಳಿಕ ಪೋಷಕ ಪಾತ್ರಗಳಲ್ಲಿ ಲೀಲಾವತಿಯವರು ತಮ್ಮನ್ನು ತೊಡಗಿಸಿಕೊಂಡರು. ನಾಯಕಿಯಾಗಿ, ಅಮ್ಮನಾಗಿ, ಅಜ್ಜಿಯಾಗಿ ನಾನಾಬಗೆಯ ಪೋಷಕಪಾತ್ರಗಳಲ್ಲಿ ನಟಿಸಿದರು. ಅವುಗಳಲ್ಲಿ ಗೆಜ್ಜೆ ಪೂಜೆ, ಸಿಪಾಯಿ ರಾಮು, ನಾಗರಹಾವು, ಭಕ್ತ ಕುಂಬಾರ ಮುಂತಾದ ಚಿತ್ರಗಳು ಪ್ರಮುಖವಾದವು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post