ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕೋವಿಡ್ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ಕೆಎಸ್‌ಐಸಿ ( Karnataka Silk Industries Corporation Ltd) ಪ್ರಸಕ್ತ ವರ್ಷ 31 ಕೋಟಿ ರೂಪಾಯಿ ಲಾಭಗಳಿಸಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ Minister Narayana Gowda ಅವರು ತಿಳಿಸಿದ್ದಾರೆ.
ಕರ್ನಾಟಕ ರೇಷ್ಮೆ ಕೈಗಾರಿಕಾ ಸಂಸ್ಥೆಯು 2021-2022 ನೇ ಆರ್ಥಿಕ ವರ್ಷದಲ್ಲಿ 204.77 ಕೋಟಿ ವಹಿವಾಟು ನಡೆಸಿದ್ದು, 31.64 ಕೋಟಿ ಲಾಭಗಳಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ 153.59 ಕೋಟಿ ವಹಿವಾಟು ನಡೆಸಿ 27.72 ಕೋಟಿ ಲಾಭ ಗಳಿಸಿತ್ತು.

Also read: ಇ ಫ್ಲಾಟ್ ಫಾರ್ಮ್‌ನತ್ತ ಗ್ರಾಹಕರ ಸೆಳೆಯಲು ನೂತನ ಪ್ರಯೋಗ: ಶಾಪ್ಸಿ ಜಾಹೀರಾತು ಅಭಿಯಾನ
ರೇಷ್ಮೆ ಇಲಾಖೆಯಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮಾರುಕಟ್ಟೆಯಲ್ಲಿ ರೈತರಿಗೆ ಅನ್ಯಾಯವಾಗದಂತೆ ಇ-ತೂಕ, ಇ ಪೇಮೆಂಟ್ ಜಾರಿ ಮಾಡಲಾಗಿದೆ. ಕಚ್ಛಾ ರೇಷ್ಮೆ ಹಾಗೂ ರೇಷ್ಮೆ ನೂಲಿನ ಬೆಲೆಯಲ್ಲಿ ಸ್ಥಿರತೆ ಕಾಪಾಡುವಲ್ಲಿ ನಮ್ಮ ಸರ್ಕಾರ ಯಶಸ್ವಿಯಾಗಿದೆ. ರೇಷ್ಮೆ ಸೀರೆ ಉತ್ಪಾದನೆಯಲ್ಲೂ ಹೊಸ ವಿನ್ಯಾಸ ಅಳವಡಿಸಿಕೊಳ್ಳಲು ಸೂಚಿಸಲಾಗಿದ್ದು, ಮಾರಾಟ ಹೆಚ್ಚಿಸಲು ಕಪಲ್ ಪ್ಯಾಕೇಜ್ ಸೇರಿದಂತೆ ಹಲವು ಹೊಸ ಹೊಸ ಯೋಜನೆಗಳನ್ನು ಜಾರಿಗೆ ನಿರ್ಧರಿಸಲಾಗಿದೆ. ಈ ಮೂಲಕ ರೇಷ್ಮೆ ಇಲಾಖೆ ಹಾಗೂ ಕೆಎಸ್‌ಐಸಿ ನಿಗಮವನ್ನು ಇನ್ನಷ್ಟು ಪ್ರಗತಿಯತ್ತ ಕೊಂಡಯ್ಯಲಾಗುವುದು ಎಂದು ಸಚಿವ ಡಾ.ನಾರಾಯಣಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post