ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಸಮಾಜದ ಪ್ರಗತಿಗೆ ಶಿಕ್ಷಣ ನೀತಿ ಪರ್ಯಾಯ ಮಾರ್ಗ. ಸಮಾಜದ ಮುಂದೆ ದೊಡ್ಡ ಸವಾಲಿದೆ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಯಾಗಬೇಕಿದೆ ಶಿಕ್ಷಣ ಕಲಿಕೆ, ಮೌಲ್ಯಮಾಪನ ಬದಲಾಗಬೇಕಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಂತೆ ಸಭೆ ನಡೆಸಿ, ವಿಧಾನಪರಿಷತ್ ಸದಸ್ಯರ ಜೊತೆ ಚರ್ಚಿಸಿದ್ದೇನೆ. ನೀತಿಗೆ ಸಂಬಂಧಿಸಿದಂತೆ ಸಲಹೆಗಳನ್ನು ಅವರು ನೀಡಿದ್ದಾರೆ. ಇದರ ಬಗ್ಗೆ ಸಾಕಷ್ಟು ಸಲಹೆಗಳನ್ನ ಕೊಟ್ಟಿದ್ದಾರೆ. ಅಭಿಪ್ರಾಯಗಳನ್ನು ಆಧರಿಸಿ ಕಾರ್ಯಕ್ರಮ ರೂಪಿಸುತ್ತೇವೆ ಎಂದು ಹೇಳಿದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಶಿಕ್ಷಣದ ಗುಣಮಟ್ಟ ಹೆಚ್ಚಳವಾಗಬೇಕಿದೆ. ಈ ನೀತಿ ವಿದ್ಯಾರ್ಥಿಗಳ ಪೂರಕವಾಗಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ ಅತ್ಯಾವಶ್ಯಕವಿದೆ. ಮೊದಲಿದ್ದ ಕೋರ್ಸ್ ವ್ಯವಸ್ಥೆ ಇದರಲ್ಲಿ ಇರುವುದಿಲ್ಲ. ಹಾಲಿ ಇರುವ ವಿಷಯಗಳೊಂದಿಗೆ ಹೊಸ ವಿಷಯಗಳಿಗೆ ಅವಕಾಶ ನೀಡಲಾಗುವುದು ಎಂದರು.
ವಿಷಯವಾರು ಕಲಿಯಲು ಶಿಕ್ಷಣ ನೀತಿ ಪ್ರಯೋಜನವಾಗಲಿದ್ದು, ಬಿಎ ಓದುವವರು ಕಾಮರ್ಸ್ ಕಲಿಯಬಹುದು. ಕಾಮರ್ಸ್ ಅಭ್ಯಾಸ ಮಾಡುತ್ತಿರುವವರು ವಿಜ್ಙಾನ ಕಲಿಯಬಹುದು. ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿ ಕಾಮರ್ಸ್ ಕಲಿಯಬಹುದು ಎಂದು ವಿವರಿಸಿದರು.
ವಿವಿ ಮಿತಿಗನುಗುಣವಾಗಿ ಸೀಟು ಪಡೆಯಬಹುದು. ಉತ್ತಮವಾದ ನೀತಿ ಇದಾಗಿದ್ದು, ಪ್ರಾದ್ಯಾಪಕರಲ್ಲೂ ಸುಧಾರಣೆಗೆ ಅವಕಾಶವಿದೆ. ರಾಷ್ಟ್ರೀಯ ಶಿಕ್ಷಣ ನೀತಿ ೧೫ ವರ್ಷ ಕಾಲ ಇರಲಿದ್ದು, ನಮ್ಮ ರಾಜ್ಯದಲ್ಲಿ 10 ವರ್ಷದೊಳಗೆ ಅನುಷ್ಠಾನ ಮಾಡುತ್ತೇವೆ ಎಂದರು.
ಐಸೋಲೇಶನ್ ವ್ಯವಸ್ಥೆಗೆ ಕಡಿವಾಣ:
ಆರ್ಟ್ಸ್‌ನವರು ಟೆಕ್ನಿಕಲ್, ಕಾಮರ್ಸ್, ಸೈನ್ಸ್ ಕಲಿಯೋಕೆ ಅವಕಾಶ ಇರಲಿಲ್ಲ. ಈಗ ಯಾರು ಯಾವ ಪಠ್ಯ ಬೇಕಾದರೂ ಕಲಿಯಬಹುದು. ಅಂತಹ ಮಲ್ಟಿ ವ್ಯವಸ್ಥೆ ಈ ನೀತಿಯಲ್ಲಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಹಕಾರಿಯಾಗಿದೆ. ಒಂದು ವರ್ಷ ಕಲಿತರೂ ಅವರಿಗೆ ಮಾನ್ಯತೆ ಸಿಗಲಿದೆ. ಇದು ಉದ್ಯೋಗ ಪಡೆಯೋಕು ಸಹಕಾರಿಯಾಗಲಿದೆ ಎಂದರು.
ಕಾಂಬಿನೇಶನ್ ವೈಸ್ ಇದು ಇರಲಿದ್ದು, ಒಂದು ಸಬ್ಜೆಕ್ಟ್ ಅನ್ನು ಧೀರ್ಘವಾಗಿ ಸ್ಟಡಿಮಾಡಬಹುದು. ಮೈನರ್ ಸಬ್ಜೆಕ್ಟ್ ಕಲಿಯೋಕು ಅವಕಾಶವಿದೆ. ಮುಂದೆ ಎರಡು ಮೇಜರ್ ಸಬ್ಜೆಕ್ಟ್ ತೆಗೆದುಕೊಳ್ಳಬಹುದು. ಈ ವರ್ಷದಿಂದಲೇ ಎಂಜಿನಿಯರಿಂಗ್‌ನಲ್ಲೂ ಬದಲಾಗಲಿದೆ. ಪದವಿಯಲ್ಲೂ ಈ ವರ್ಷವೇ ಶಿಕ್ಷಣ ನೀತಿ ಜಾರಿಯಾಗಲಿದೆ ಎಂದು ತಿಳಿಸಿದರು.
ಎಂಜಿನಿಯರಿಂಗ್ ನವರು ಗಣಿತ ಕಲಿಯಬಹುದು ಹಾಗೂ ಕಾನೂನು ಪಠ್ಯವನ್ನು ಕಲಿಯುವುದಕ್ಕೂ ಅವಕಾಶವಿದೆ. ಮೆಡಿಕಲ್ ಹೊರತುಪಡಿಸಿ ಎಲ್ಲರಿಗೆ ಎಲ್ಲ ವಿಷಯ ಕಲಿಯಲು ಅವಕಾಶವಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೇಸರೀಕರಣ:
ಇದು ನಾವು ತರಾತುರಿಯಲ್ಲಿ ಅನುಷ್ಠಾನ ಮಾಡುತ್ತಿಲ್ಲ. ಕಳೆದ ೭ ವರ್ಷದಿಂದಲೂ ಇದು ನಡೆಯುತ್ತಿದೆ. ಹಂತಹಂತವಾಗಿ ಇದರ ಅನುಷ್ಠಾನವಾಗುತ್ತಿದೆ ಎಂದರು.
ಒಳ್ಳೆಯದು ಮಾಡಿದರೆ ಕೇಸರಿಕರಣ ಎಂದರೆ ಹೇಗೆ? ಹಾಗೆ ತಿಳಿದುಕೊಂಡರೆ ನಮ್ಮ ಸಮಸ್ಯೆಯೇನಿಲ್ಲ. ವಿದ್ಯಾರ್ಥಿಗಳು ಯಾವುದನ್ನೂ ಬೇಕಾದರೂ ಕಲಿಯಬಹುದು. ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳುವುದು ವಿವಿಗಳಿಗೆ ನಿರ್ಧಾರಕ್ಕೆ ಬಿಡಲಾಗಿದೆ. ಇದರಲ್ಲಿ ಕೇಸರಿಕರಣ ಎಲ್ಲಿಂದ ಬರುತ್ತದೆ ಎಂದು ಸಚಿವ ಡಾ. ಅಶ್ವಥ್ ನಾರಾಯಣ್ ಕಿಡಿಕಾರಿದರು.
ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಸಮಸ್ಯೆಯಿಲ್ಲ. ವಿದ್ಯಾರ್ಥಿಗಳಿಗೆ ಇದರಿಂದ ಸಮಸ್ಯೆಯಾಗುವುದಿಲ್ಲ. ಯಾವುದೇ ಗೊಂದಲಗಳು ಉದ್ಬವವಾಗುವುದಿಲ್ಲ. ತರಾತುರಿಯಲ್ಲಿ ನಾವು ಇದನ್ನು ಜಾರಿಗೆ ತರುತ್ತಿಲ್ಲ. ಕಾಂಬಿನೇಷನ್ ಬದಲು ಸಬ್ಜೆಕ್ಟ್ ಆಯ್ಕೆಗೆ ಅವಕಾಶವಿರುತ್ತದೆ. ಈ ವರ್ಷ ಎಂಜಿನಿಯರಿಂಗ್, ಬಿಎ, ಬಿಕಾಂ ಮತ್ತು ಬಿಎಸ್ಸಿ ಪದವಿಗೆ ಮಾತ್ರ ಜಾರಿ ಮಾಡಲಾಗುತ್ತದೆ ಎಂದರು.
ಎನ್‌ಇಪಿಜಾರಿಯಿಂದ ಶುಲ್ಕ ಹೆಚ್ಚಳವಿಲ್ಲ. ಎಷ್ಟು ವಿದ್ಯಾರ್ಥಿ ಸೇರಿದರೂ ದಾಖಲಾತಿ ಮಾಡಿಕೊಳ್ಳುತ್ತೇವೆ. ಭಾಷೆ ಕಲಿಯೋಕೆ ಎರಡು ವರ್ಷ ಅವಕಾಶವಿತ್ತು. ವಿಶ್ವವಿದ್ಯಾನಿಲಯಗಳ ಸ್ವಾಯತ್ತತೆಗೆ ಧಕ್ಕೆಯಾಗುವುದಿಲ್ಲ. ಕಟ್ಟಡದೊಳಗೆ ಕಲಿಯಬೇಕೆಂಬ ನಿರ್ಬಂಧವಿತ್ತು. ಈಗ ಆನಿರ್ಬಂಧವನ್ನು ಸಡಿಲಿಕೆ ಮಾಡಿದ್ದೇವೆ. ಎಲ್ಲಿ ಬೇಕಾದರೂ ಕಲಿಯಲು ಅವಕಾಶ ಮಾಡಿಕೊಟ್ಟಿದ್ದೇವೆ ಎಂದರು.
ಕಲಿಕೆಯಲ್ಲಿ ಸುಧಾರಣೆ ತರಬೇಕು. ಹಾಗಾಗಿಯೇ ಇದನ್ನು ಜಾರಿಗೆ ತರುತ್ತಿದ್ದೇವೆ. ವಿದ್ಯಾರ್ಥಿ ಬಿಕಾಂ ಮಾಡ್ತಿದ್ದಾನೆ ಅಂದುಕೊಳ್ಳಿ ಆ ವಿದ್ಯಾರ್ಥಿಗೆ ಆರ್ಟ್ಸ್ ಸಬ್ಜೆಕ್ಟ್ ಕಲಿಯಲು ಅವಕಾಶವಿದೆ. ಇಲ್ಲಿ ಪದವಿ ಏನು ಬದಲಾವಣೆಯಾಗುವುದಿಲ್ಲ ಸಬ್ಜೆಕ್ಟ್ ಆಯ್ಕೆಗಷ್ಟೇ ಇಲ್ಲಿ ಅವಕಾಶವಿರುತ್ತದೆ. ಕೇಂದ್ರ ಸರ್ಕಾರವನ್ನು ಮೆಚ್ಚಿಸುವುದಕ್ಕೆ ಅನ್ನೋ ಆರೋಪ ಬೇಡ. ಇದು ಕಳೆದ ಏಳು ವರ್ಷದಿಂದಲೂ ನಡೆಯುತ್ತಿದೆ. ಈಗ ನಾವು ಮೊದಲಿಗೆ ಲೀಡ್ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post