ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಹಲವು ಋಣಗಳಲ್ಲಿ ಆಚಾರ್ಯ ಋಣ ಎನ್ನುವುದು ತನ್ನದೇ ಆದ ಮಹತ್ವವನ್ನು ಪಡೆದಿದೆ ಎಂಬುದನ್ನು ನಾವುಗಳು ಸೂಕ್ಷ್ಮವಾಗಿ ಅರಿತುಕೊಳ್ಳಬೇಕಾಗಿದೆ ಎಂದು ಕನ್ನಡ ವೈದ್ಯ ಬರಹಗಾರ ಡಾ.ನಾ. ಸೋಮೇಶ್ವರ #Dr. Na. Someshwar ಹೇಳಿದರು.
ಜಯನಗರದ ಯುವಪಥ ವಿವೇಕ ಸಭಾಂಗಣದಲ್ಲಿ ಪಾಂಚಜನ್ಯ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ‘ಪಾಂಚಜನ್ಯ ಪುರಸ್ಕಾರ 2024’ವನ್ನು ಸ್ವೀಕರಿಸಿ ಮಾತನಾಡಿದರು.

‘ಪಾಂಚಜನ್ಯ ಪುರಸ್ಕಾರ’ ನನ್ನ ಕಾರ್ಯಭಾರವನ್ನು ಇನ್ನಷ್ಟು ಹೆಚ್ಚಿಸಿದೆ. ೧೯೭೧ರಲ್ಲಿ ಮೊದಲ ಬಾರಿಗೆ ಕನ್ನಡಪ್ರಭದಲ್ಲಿ ಲೇಖನ ಬರೆಯಲು ಪ್ರಾರಂಭಿಸಿ, ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದುಕೊಂಡು ಸಾಗಿದ್ದು ವಿಶೇಷ ಅನುಭವಗಳನ್ನು ನೀಡಿತು. ಹೀಗೆ ಹಲವು ವಿಭಾಗಗಳಲ್ಲಿ ತೊಡಗಿಸಿಕೊಳ್ಳುತ್ತಾ ದೂರದರ್ಶನ ಚಂದನವಾಹಿನಿಯ “ಥಟ್ ಅಂತ ಹೇಳಿ” ಕಾರ್ಯಕ್ರಮ ನಡೆಸಿಕೊಡುವಿಕೆ ಅತ್ಯುತ್ತಮ ಅವಕಾಶ ಎಂದೇ ತಿಳಿದಿರುವೆ. ಪ್ರಸ್ತುತ ೪,೭೫೦ ಕಂತುಗಳು ಪೂರ್ಣಗೊಂಡಿದ್ದು, ಇದರ ಬಗ್ಗೆ ಒಳ್ಳೆಯ ಅಭಿಪ್ರಾಯ ಹೇಳುತ್ತಿರುವ ವೀಕ್ಷಕರಿಗೂ ಅನಂತ ಧನ್ಯವಾದಗಳನ್ನು ಅರ್ಪಿಸಿದರು. ಈ ಕಾರ್ಯಕ್ರಮದ ಮೂಲಕ ಕೊಂಚ ಉತ್ತಮ ಮನ್ನಣೆ ಬಂದಿದ್ದರೆ ಅದು ನನ್ನ ಪತ್ನಿ ಮತ್ತು ಪುತ್ರ ಕಾರಣಕರ್ತರು ಎಂದರು.

ನಿಮಾನ್ಸ್ ನಿವೃತ್ತ ಮನೋವಿಜ್ಞಾನ ಪ್ರಾಧ್ಯಾಪಕ ಡಾ.ಸಿ.ಎಸ್. ಚಂದ್ರಶೇಖರ್ ಮಾತನಾಡಿ, ಅನೇಕ ಸರ್ಕಾರಿ ಶಾಲೆಗಳು ಮೂಲ ಸೌಕರ್ಯಗಳ ಕೊರತೆಯಿಂದ ನಲುಗುತ್ತಿವೆ. ಕೆಲವು ಪಠ್ಯಪಠ್ಯೇತರ ಸಾಮಾಗ್ರಿಗಳು ಇರುವುದಿಲ್ಲ. ನಮ್ಮ ದೇಶದಲ್ಲಿ ಸಾಕಷ್ಟು ಉದ್ಯಮ ಸಂಸ್ಥೆಗಳಿವೆ ಅವರು ಸರ್ಕಾರಿ ಶಾಲೆಗಳನ್ನು ದತ್ತುಪಡೆದು ಶೈಕ್ಷಣಿಕ ಬೆಳವಣಿಗೆಗೆ ಕಾರಣವಾಗಬೇಕು. ಬೆಂಗಳೂರಿನಲ್ಲಿ ಸಾಕಷ್ಟು ಬಿಬಿಎಂಪಿ ಶಾಲೆಗಳಿದ್ದು ಅವುಗಳಿಗೆ ಉದ್ಯಮ ಸಂಸ್ಥೆಗಳ ನೆರವು ಅವಶ್ಯಕವಾಗಿದೆ. ನಾ.ಸೋಮೇಶ್ವರ ವೈದ್ಯ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ವಿಶೇಷ. ನಮ್ಮ ರಾಜ್ಯದಲ್ಲಿ ಲಕ್ಷಕ್ಕೂ ಹೆಚ್ಚು ವೈದ್ಯರಿದ್ದರು ಅವರ ಕನ್ನಡ ಪ್ರೀತಿ ಅಷ್ಟಕ್ಕಷ್ಟೇ ಎಂದು ಆತಂಕ ವ್ಯಕ್ತಪಡಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post