ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಡ್ರೈವರ್ ಲಾಜಿಸ್ಟಿಕ್ಸ್, Driver Logistics ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸರಕು ಸಾಗಣೆ ಸೇವಾ ಸಂಸ್ಥೆ, ಕರ್ನಾಟಕದಲ್ಲಿ ತನ್ನ ಬಹುಗ್ರಾಹಕ ಉಗ್ರಾಣ ಮತ್ತು ಭಾಗಶಃ ಟ್ರಕ್ ಲೋಡ್ ಕಾರ್ಯಾಚರಣೆಗಳನ್ನು ಆರಂಭಿಸಿದೆ. ಅಖಿಲ್ ಆಶಿಕ್, ಸಿಇಒ ಅವರು ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಭಾರತವನ್ನು ದೇಶದ ಇತರ ಭಾಗಗಳೊಂದಿಗೆ ಬೆಸೆಯುವ ಉದ್ದೇಶದಿಂದ ಕರ್ನಾಟಕ ಹೆಬ್ಬಾಗಿಲಾಗಿ ಇರಿಸಿಕೊಳ್ಳುವ ಕಂಪನಿಯ ವ್ಯೂಹಾತ್ಮಕ ಕಾರ್ಯತಂತ್ರಗಳನ್ನು ಪ್ರಕಟಿಸಿದರು.
ಮುಂದಿನ ವರ್ಷಗಳಲ್ಲಿ ತನ್ನ ಕರ್ನಾಟಕ ಕಾರ್ಯಾಚರಣೆಗಾಗಿ ಇನ್ನೂ 150 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಉದ್ದೇಶ ಹೊಂದಿರುವ ಡ್ರೈವರ್ ಲಾಜಿಸ್ಟಿಕ್ಸ್, ಯುವ ಪದವೀಧರರ ನೇಮಕಕ್ಕೆ ಒತ್ತು ನೀಡಲಿದೆ. ಕಂಪನಿಯು ಕರ್ನಾಟಕದಾದ್ಯಂತ ತನ್ನ ಹೆಜ್ಜೆ ಗುರುತು ವಿಸ್ತರಿಸಲು ಸನ್ನದ್ಧವಾಗಿದ್ದು, ರಾಜ್ಯದ ಪ್ರಮುಖ ಪಟ್ಟಣಗಳಲ್ಲಿ ಉಗ್ರಾಣ (ವೇರ್‍ಹೌಸಿಂಗ್), ಫುಲ್ ಟ್ರಕ್ ಲೋಡ್ (ಎಫ್‍ಟಿಎಲ್) ಮತ್ತು ಭಾಗಶಃ ಟ್ರಕ್ ಲೋಡ್ (ಪಿಟಿಎಲ್) ಸೇವೆಗಳನ್ನು ತನ್ನ ಗ್ರಾಹಕರಿಗೆ ಒದಗಿಸಲಿದೆ.

2019ರಲ್ಲಿ ಸ್ಥಾಪನೆಯಾಗಿರುವ ಡ್ರೈವರ್ ಲಾಜಿಸ್ಟಿಕ್ಸ್, ಪ್ರತಿವರ್ಷ 30%ನ ಅತ್ಯುತ್ತಮ ಬೆಳವಣಿಗೆ ದರವನ್ನು ದಾಖಲಿಸಿದೆ. ದೇಶದ ಏಳು ರಾಜ್ಯಗಳಲ್ಲಿ ಕಂಪನಿಯು ತನ್ನ ಅಸ್ತಿತ್ವವನ್ನು ಸಾಬೀತುಪಡಿಸಿದೆ. ತನ್ನ ವಿಸ್ತರಣೆ ಕಾರ್ಯತಂತ್ರದ ಭಾಗವಾಗಿ, ಕಂಪನಿಯು ಮುಂದಿನ 18 ತಿಂಗಳಲ್ಲಿ ತನ್ನ ಉಗ್ರಾಣಗಳ ಸಂಖ್ಯೆಯನ್ನು 53 ರಿಂದ 100ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.

Also read: ಮೂರು ರಾಜ್ಯಗಳಲ್ಲಿ ಬಿಜೆಪಿ ಪ್ರಪಂಡ ಗೆಲುವು ಹಿನ್ನೆಲೆ: ಸಿಹಿ ಹಂಚಿ ವಿಜಯೋತ್ಸವ ಆಚರಣೆ
ಅಖಿಲ್ ಆಶಿಕ್ ಅವರು ಕೇಂದ್ರ ಸರಕಾರದ ಗತಿಶಕ್ತಿಯಂತಹ ಪ್ರೋತ್ಸಾಹಕ ಉಪಕ್ರಮಗಳು ಮತ್ತ್ತು 3ಪಿಎಲ್ ವಲಯದ ಕಂಪನಿಗಳಿಗೆ ಸಿಗುತ್ತಿರುವ ಉತ್ತೇಜನದಿಂದಾಗಿ ಸರಕು ಸಾಗಣೆ ವಲಯ ಅತ್ಯುತ್ತಮ ಬೆಳವಣಿಗೆ ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.










Discussion about this post