ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
156ನೇ ವಿಧಾನ ಮಂಡಲ ಅಧಿವೇಶನದ ಮೊದಲನೇಯ ದಿನವಾದ ಇಂದು, ವಿಧಾನ ಪರಿಷತ್ತಿನ ಶೂನ್ಯ ವೇಳೆಯಲ್ಲಿ ಶಾಸಕ ಡಿ.ಎಸ್. ಅರುಣ್ ರವರು, #D S Arun ರಾಜ್ಯದ ಧಾರ್ಮಿಕ ಹೆಮ್ಮೆ ಹಾಗೂ ಲಕ್ಷಾಂತರ ಹಿಂದೂ ಭಕ್ತರ ಭಾವನೆಯ ಕೇಂದ್ರವಾಗಿರುವ ಧರ್ಮಸ್ಥಳದ #Dharmasthala ವಿರುದ್ಧ ಯಾವುದೇ ದೃಢವಾದ ಸಾಕ್ಷ್ಯವಿಲ್ಲದೆ ಅನಾಮಿಕ ವ್ಯಕ್ತಿ ಮಾಡಿದ ಆರೋಪವನ್ನು ತೀವ್ರವಾಗಿ ಖಂಡಿಸಿದರು.
ಇಂತಹ ಸುಳ್ಳು ಹಾಗೂ ಉದ್ದೇಶಪೂರಿತ ಆರೋಪಗಳಿಂದ ಸನಾತನ ಧರ್ಮದ ಪಾವಿತ್ರ್ಯಕ್ಕೆ ಧಕ್ಕೆ ತರುತ್ತಿರುವುದು ಧರ್ಮ ವಿರೋಧಿ ಶಕ್ತಿಗಳ ಹಳೆಯ ತಂತ್ರ. ಸರ್ಕಾರವು ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸಿ, ಆರೋಪದ ಹಿಂದೆ ಇರುವ ನಿಜಸ್ವರೂಪವನ್ನು ತಕ್ಷಣ ಬಹಿರಂಗಪಡಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸರ್ಕಾರವು ತನಿಖೆಯನ್ನು ತ್ವರಿತಗೊಳಿಸಲು, ಗೃಹ ಸಚಿವರ ಮೂಲಕ ಪ್ರಗತಿ ವರದಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಲು ಹಾಗೂ ಹಿಂದೂ ಧರ್ಮದ ಪಾವಿತ್ರ್ಯವನ್ನು ಹಾಳುಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮಾನ್ಯ ಶಾಸಕರಾದ ಡಿ.ಎಸ್.ಅರುಣ್ ರವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post