ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಈ ವರ್ಷದ ಎಪ್ರಿಲ್- ಮೇಯಲ್ಲಿ ಜಿಲ್ಲಾ ಪಂಚಾಯತ್-ತಾಲೂಕು ಪಂಚಾಯತ್‌ಗಳಿಗೆ ಚುನಾವಣೆ ನಡೆಸಲು ಆಯೋಗ ಸಿದ್ಧವಾಗಿದೆಯಾದರೂ ಕ್ಷೇತ್ರಗಳ ಅಂತಿಮ ಮೀಸಲಾತಿ ಪಟ್ಟಿ ಕೊಡಲು ಸರಕಾರ ಮೀನಮೇಷ ಎಣಿಸುತ್ತಿರುವುದರಿಂದ ಕಾದು ಸುಸ್ತಾಗಿರುವ ರಾಜ್ಯ ಚುನಾವಣಾ ಆಯೋಗ ಕೊನೆಗೆ ರಾಜ್ಯದ 5 ಮಹಾನಗರ ಪಾಲಿಕೆಗಳಿಗೆ #Mahanagara Palike ಮಾರ್ಚ್-ಎಪ್ರಿಲ್‌ನಲ್ಲಿ ಚುನಾವಣೆ ನಡೆಸಲು ಮುಂದಾಗಿದೆ.
ಮಂಗಳೂರು, ಮೈಸೂರು, ತುಮಕೂರು, ಶಿವಮೊಗ್ಗ, ದಾವಣಗೆರೆ ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಯಲಿದೆ.

Also read: ಮಹಾಕುಂಭದಲ್ಲಿ ಪ್ರಧಾನಿ ಮೋದಿ ಪುಣ್ಯಸ್ನಾನ | ಇಂದೇ ಆಯ್ಕೆ ಮಾಡಿಕೊಂಡಿದ್ದೇಕೆ?
ಈಗಿರುವ ಮೀಸಲಾತಿಯಂತೆ ಚುನಾವಣೆ?
ಅವಧಿ ಮುಗಿದ ಪಂಚಾಯತ್ ಅಥವಾ ನಗರ ಸ್ಥಳೀಯ ಸಂಸ್ಥೆಗಳಿಗೆ ಕಾಲಮಿತಿಯೊಳಗೆ ಚುನಾವಣೆ ನಡೆಸಲು ಮೀಸಲಾತಿ-ಕ್ಷೇತ್ರ ಮರುವಿಂಗಡಣೆ ನಿಗದಿ ಸಕಾಲದಲ್ಲಿ ಆಗದಿರುವುದೇ ಬಹುದೊಡ್ಡ ಅಡ್ಡಿ. ಸರಕಾರದಿಂದ ಸಾಮಾನ್ಯವಾಗಿ ಈ ಪ್ರಕ್ರಿಯೆ ವಿಳಂಬವಾಗುತ್ತದೆ. ಅನಂತರ ವ್ಯಾಜ್ಯ ಕೋರ್ಟ್ ಮೆಟ್ಟಿಲೇರಿದರೆ ಅದು ಯಾವಾಗ ಮುಗಿಯುತ್ತದೆ ಎಂದು ಹೇಳಲಾಗದು. ಹಾಗಾಗಿ ಈ 5 ಮಹಾನಗರ ಪಾಲಿಕೆಗಳಿಗೆ ಈಗಿರುವ ಮೀಸಲಾತಿ ಮತ್ತು ಕ್ಷೇತ್ರ ಮರು ವಿಂಗಡಣೆ ಆಧಾರದಲ್ಲಿಯೇ ಚುನಾವಣೆಗೆ ಹೋಗುವುದಕ್ಕೆ ಆಯೋಗ ನಿರ್ಧರಿಸಿದೆ. ಏಕೆಂದರೆ ಮೀಸಲಾತಿ-ಕ್ಷೇತ್ರ ಮರು ವಿಂಗಡಣೆ ವಿಳಂಬವಾದರೆ ಹಾಲಿ ಇರುವ ಮೀಸಲಾತಿ-ಕ್ಷೇತ್ರ ಮರು ವಿಂಗಡಣೆಯಂತೆ ಚುನಾವಣೆ ನಡೆಸಬಹುದು ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post