ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸೀರಿಯಲ್ ದೃಶ್ಯವೊಂದರೆ ಚಿತ್ರೀಕರಣದಲ್ಲಿ ಹೆಲ್ಮೆಟ್ ಧರಿಸದೇ ಇದ್ದ ಕಾರಣ ನಟಿ ವೈಷ್ಣವಿ ಗೌಡ #Vaishnavi Gowda ಅವರಿಗೆ ಬೆಂಗಳೂರು ಪೊಲೀಸರು ದಂಡ ವಿಧಿಸಿ, ಎಚ್ಚರಿಕೆ ನೋಟೀಸ್ ನೀಡಿರುವ ಘಟನೆ ನಡೆದಿದೆ.
ಏನಿದು ಘಟನೆ?
ಧಾರವಾಹಿಯೊಂದರ ಪಾತ್ರದಲ್ಲಿ ತಮ್ಮ ಸ್ನೇಹಿತೆ ಜೊತೆ ಬೈಕ್’ನಲ್ಲಿ ತೆರಳುವ ಪಾತ್ರವೊಂದರಲ್ಲಿ ವೈಷ್ಣವಿ ಗೌಡ ಅಭಿನಯಿಸಿದ್ದರು. ಇದರ ಶೂಟಿಂಗ್ ವೇಳೆಯಲ್ಲಿ ಬೈಕ್ ಚಲಾಯಿಸುತ್ತಿದ್ದ ವೈಷ್ಣವಿ ಗೌಡ ಅವರು ಹೆಲ್ಮೆಟ್ ಧರಿಸಿರಲಿಲ್ಲ. ಇದು ಸಂಚಾರಿ ನಿಯಮದ ಉಲ್ಲಂಘನೆಯಾಗಿದೆ.

Also read: ಗೀತಾ ಶಿವರಾಜಕುಮಾರ್ ಗೆಲ್ತಾರೆ | ಬೇಕಾದರೆ ಟ್ರಾಕ್ಟರ್ ಪಣಕ್ಕಿಡ್ತೀನಿ | ರೈತನ ಚಾಲೆಂಜ್
ದೂರು ಸ್ವೀಕರಿಸಿದ ಪೊಲೀಸರು ಬೆಂಗಳೂರು ರಾಜಾಜಿನಗರ ಪೊಲೀಸರಿಗೆ ವರ್ಗಾವಣೆ ಮಾಡಿದ್ದರು. ಸಾಮಾಜಿಕ ಹೋರಾಟಗಾರ ನೀಡಿದ ದೂರಿನ ಅನ್ವಯ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ವೈಷ್ಣವಿ ಗೌಡ ಅವರಿಗೆ ರಾಜಾಜಿನಗರ ಸಂಚಾರ ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ.

ಈಗ ನಟಿ ವೈಷ್ಣವಿ ಗೌಡ ಅವರಿಗೆ ವಾರ್ನಿಂಗ್ ಮಾಡಿ ಕಳಿಸಿದ್ದು, ದ್ವಿಚಕ್ರ ವಾಹನದ ಮಾಲಕಿ ಸವಿತಾ ಎಂಬವರಿಗೆ ಸಂಚಾರ ಪೊಲೀಸರು 500 ರೂ ದಂಡ ವಿಧಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಧಾರವಾಹಿಯ ನಟಿ, ನಿರ್ದೇಶಕ ಮತ್ತು ಪ್ರಸಾರ ಮಾಡಿದ ವಾಹಿನಿ ಮೇಲೆ ಕ್ರಮ ಜರುಗಿಸಬೇಕು ಎಂದು ಜಯಪ್ರಕಾಶ್ ಎಕ್ಕೂರು ಒತ್ತಾಯಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post