ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
“ಆಸ್ಕರ್ ಕೃಷ್ಣ” ನಟಿಸಿ, ನಿರ್ದೇಶಿಸುತ್ತಿರುವ “ಕೃತ್ಯ” Kruthya ಚಿತ್ರದ ‘ಫಸ್ಟ್ ಲುಕ್’ ಅನ್ನು, ನೂರಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿ ದಾಖಲೆ ನಿರ್ಮಿಸಿರುವ ಹಿರಿಯ ನಿರ್ದೇಶಕರಾದ “ಓಂ ಸಾಯಿ ಪ್ರಕಾಶ್” ರವರು ಲೋಕಾರ್ಪಣೆ ಮಾಡಿದರು.
ಯುಗಾದಿ ಹಬ್ಬ ದ ಶುಭ ದಿನದಂದು ಫಸ್ಟ್ ಲುಕ್ ಬಿಡುಗಡೆ ಮಾಡಿ ಮಾತನಾಡಿದ “ಸಾಯಿ ಪ್ರಕಾಶ್” Director Sai Prakash ರವರು ‘ಆಸ್ಕರ್ ಕೃಷ್ಣ’ ಅವರ “ಕೃತ್ಯ” ಚಿತ್ರದ ‘ಫಸ್ಟ್ ಲುಕ್’ ಈಸ್ ‘ಬೆಸ್ಟ್ ಲುಕ್’. ಇದೇ ರೀತಿ ಚಿತ್ರ ಕೂಡ ಅದ್ಭುತವಾಗಿ ಮೂಡಿಬರಲಿ ಎಂದು ಚಿತ್ರತಂಡವನ್ನು ಹಾರೈಸಿದರು.
ಈ ಸಂದರ್ಭದಲ್ಲಿ ಹಿರಿಯ ನಿರ್ಮಾಪಕರೂ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಕಾರ್ಯದರ್ಶಿಗಳಾದ ಭಾ.ಮ ಹರೀಶ್ ಮತ್ತು “ಕೃತ್ಯ” ಚಿತ್ರದ ಸಹ ನಿರ್ಮಾಪಕರಾದ ‘ಗೌತಮ್ ರಾಮಚಂದ್ರ’ ಉಪಸ್ಥಿತರಿದ್ದರು.
Also read: ರನ್ನಿಂಗ್ ಟ್ರಾಕ್ ಮತ್ತು ಪೆವಿಲಯನ್ ಕಾಮಗಾರಿ ಸ್ಥಳಕ್ಕೆ ಸಂಸದ ರಾಘವೇಂದ್ರ ಭೇಟಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post