ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸಮುದಾಯದ ಮೇಲೆ ನಡೆಯುತ್ತಿರುವ ಆಕ್ರಮಣಕಾರಿ ಪಿತೂರಿ ಮತ್ತು ವ್ಯವಸ್ಥೆಯ ವಿರುದ್ದ ನಾವು ನಮ್ಮನ್ನ ರಕ್ಷಿಸಿಕೊಳ್ಳಬೇಕಿರುವ ಹಿನ್ನಲೆಯಲ್ಲಿ ಕಾನೂನು ಸಮಿತಿ ರಚನೆ ಮಾಡಲಾಗಿದೆಯೆಂದು ಬ್ರಾಹ್ಮಣ ಮಹಾಸಭಾದ ರಾಜ್ಯಧ್ಯಕ್ಷ ಅಶೊಕ್ ಹಾರನಹಳ್ಳಿ ತಿಳಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭ ಗಾಯತ್ರೀ ಭವನದಲ್ಲಿ ನಡೆದ ವಿಪ್ರ ವಕೀಲರ ಸಭೆಯಲ್ಲಿ ಕ್ರಿಮಿನಲ್ ಕಾನೂನು ಸಮಿತಿ ರಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ಬ್ರಾಹ್ಮಣ ಸಮುದಾಯದ ವಿರುದ್ದದ ಹೇಳಿಕೆಗಳು ತೀವ್ರಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ. ಬ್ರಾಹ್ಮಣ ಸಮುದಾದಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಪುರೋಹಿತರ ಪರಿಷತ್ ವತಿಯಿಂದ ಪದಾಧಿಕಾರಿಗಳು ಮಾತನಾಡಿ, ಪುರೋಹಿತ ಅರ್ಚಕರು ಸಮಾಜದಲ್ಲಿ ಭಯದ ವಾತಾವರಣದಲ್ಲಿದ್ದೇವೆ, ನಮ್ಮಿಂದ ಯಾರಿಗೂ ತೊಂದರೆ ಆಗದಿದ್ದರೂ ನಮ್ಮ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಹಾಗಾಗಿ ನಮಗೂ ನ್ಯಾಯಬದ್ಧವಾದ ಕಠಿಣ ಕಾನೂನಿನ ಅಗತ್ಯವಿದೆ ಎಂದರು.
ಕಾನೂನಿನ ನೆರವು, ಸಮುದಾಯದ ವಕೀಲರ ಸಂಘಟನೆ ಮತ್ತು ಇತರ ವಿಷಯಗಳ ಬಗ್ಗೆ ಕ್ರಮ ಕೈಗೊಳ್ಳಲು ಹಿರಿಯ ವಕೀಲ ಪುತ್ತಿಗೆ ರಮೇಶ್ ನೇತೃತ್ವದಲ್ಲಿ ವಕೀಲರ ಸಮಿತಿ ರಚಿಸಲಾಯಿತು. ಇದಲ್ಲದೆ ಹಿರಿಯ ವಕೀಲ ಎ ಎನ್ ಕೃಷ್ಣಸ್ವಾಮಿ ನೇತೃತ್ವದಲ್ಲಿ ಮಠ ಮಂದಿರಗಳ ಸಮಸ್ಯೆಗಳ ಸಂಭಂದಿಸಿದಂತೆ ನೆರವು ನೀಡಲು ಉಪ ಸಮಿತಿ ರಚಿಸಲಾಯಿತು.
ಬ್ರಾಹ್ಮಣ ಸಮುದಾಯವನ್ನು ಅದರಲ್ಲೂ ಪುರೋಹಿತರನ್ನು ನಿಂದನೆ ಮಾಡುವವರ ಮೇಲೆ ಕ್ರಿಮಿನಲ್ ಮತ್ತು ಮಾನ ನಷ್ಟ ಮೊಕದ್ದಮೆ ಹೂಡಲು ಹಿರಿಯ ಕ್ರಿಮಿನಲ್ ವಕೀಲರಾದ ಸಿವಿ ಸುಧೀಂದ್ರ ಅವರ ನೇತೃತ್ವದಲ್ಲಿ ಉಪ ಸಮಿತಿ ರಚಿಸಲಾಯಿತು.
ಈ ಸಂಧರ್ಭದಲ್ಲಿ ಮಾಜಿ ಅಡಿಶನಲ್ ಅಡ್ವೊಕೇಟ್ ಜೆನರಲ್ ಅರ್ ಸುಬ್ರಮಣ್ಯ ,ಮಾಜಿ ಅಡಿಶನಲ್ ಅಡ್ವೊಕೇಟ್ ಜನರಲ್ ಅರುಣ್ ಶ್ಯಾಮ್, ಏ ಸಿ ಬಿ ಮಾಜಿ ಅಡ್ವೊಕೇಟ್ ಮನ ಮೋಹನ್ , ಸೀನಿಯರ್ ಅಡ್ವೊಕೇಟ್ ಪ್ರಶಾಂತ್ ಚಂದ್ರ, ಹಿರಿಯ ವಕೀಲ ಚಂದ್ರಶೇಖರ, ಬಾಲಗಂಗಾಧರ, ಶಂಕರ ಭಟ್, ಸುಧಾಕರ್ ಬಾಬು, ರಮೇಶ್, ವಿಶ್ವನಾಥ್ ಇನ್ನಿತರರು ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















