ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರು ಉತ್ತರ ರಾಜಾಜಿನಗರ ಬ್ರಾಹ್ಮಣ ಸಭಾ ವತಿಯಿಂದ ಶ್ರೀ ಜಗನ್ನಾಥ ಪಂಡಿತರು ಸಂಸ್ಕೃತದಲ್ಲಿ ಮೂಲ ರಚನೆ ಮಾಡಿರು ಕೀರ್ತಿಶೇಷ ಪಂಡಿತ ಶ್ರೀ ಪಂಡರಿನಾಥಾಚಾರ್ಯ ಗಲಗಲಿ (ರಾಷ್ಟ್ರಪತಿ ಪುರಸ್ಕೃತರು ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರು)ರವರು ಕನ್ನಡಕ್ಕೆ ಅನುವಾದಿಸಿರುವ ರಾಗ ತಾಳ ಭಾವದ ಕಾವ್ಯ ‘ಗಂಗಾಲಹರಿಯ’ ಆಯ್ದ ಪದ್ಯಗಳ ವಾಚನ -ವ್ಯಾಖ್ಯಾನವನ್ನು ರಾಜಾಜಿನಗರ ಒಂದನೇ ಕೆ ಬ್ಲಾಕ್, ಬಾಲಮೋಹನ್ ವಿದ್ಯಾ ಮಂದಿರ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಪಂಡಿತ ಪೂಜ್ಯ ಗಲಗಲಿ ಆಚಾರ್ಯರ ನೇರ ಶಿಷ್ಯರಾದ ಖ್ಯಾತ ವಾಗ್ಮಿ ಡಾ. ವೆಂಕಟನರಸಿಂಹಾಚಾರ್ಯ ಜೋಷಿ ,ಗುಡೇ ಬಲ್ಲೂರರವರು ವಾಚನ- ವ್ಯಾಖ್ಯಾನವನ್ನು ನಡೆಸಿಕೊಟ್ಟರು. ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಸಂಸ್ಕೃತ ಮತ್ತು ಕನ್ನಡ ಉಭಯಭಾಷಾ ವಿದ್ವಾಂಸರಾಗಿ, ವಾಗ್ಮಿಯಾಗಿ ಸಾರಸ್ವತ ಲೋಕಕ್ಕೆ ಮಹತ್ತರ ಕೊಡುಗೆಯನ್ನಿತ್ತ ಗಲಗಲಿ ಆಚಾರ್ಯರ ಸೇವೆಯನ್ನು ದೇಶದ ಶೈಕ್ಷಣಿಕ ವಲಯದ ಯಾವುದೇ ವಿಶ್ವವಿದ್ಯಾಲಯಗಳು ಗುರಿತಸದೇ ಇರುವುದುದುರಾದುಷ್ಟಕರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post