ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದೇಶವನ್ನು ಮುನ್ನಡೆಸುವ ಹಾಗೂ ನಿಮ್ಮ ಕ್ಷೇತ್ರವನ್ನು ಮುಂದಿನ ಐದು ವರ್ಷ ಪ್ರತಿನಿಧಿಸುವ ನಾಯಕನನ್ನು ಆರಿಸಿಕೊಳ್ಳುವ ಅವಕಾಶವನ್ನು ತಪ್ಪಿಸಿಕೊಳ್ಳದೇ, ಮತಕೇಂದ್ರಕ್ಕೆ ಬಂದು ಮತದಾನ ಮಾಡಿ ಎಂದು ನಟ ಅನಿರುದ್ ಜತ್ಕರ್ #Anirudh Jathkar ಕರೆ ನೀಡಿದರು.
ಜೆಪಿ ನಗರ 2ನೇ ಹಂತದ 172ನೇ ಮತಕೇಂದ್ರದಲ್ಲಿ ತಮ್ಮ ಹಕ್ಕು ಚಲಾಯಿಸಿ, ಕಲ್ಪ ನ್ಯೂಸ್’ನೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

Also read: ಮತದಾನಕ್ಕೆ ಆಗಮಿಸಿದ್ದ ಮಹಿಳೆಗೆ ಹೃದಯಾಘಾತ | ವೈದ್ಯರ ಸಮಯಪ್ರಜ್ಞೆಯಿಂದ ಉಳಿಯಿತು ಜೀವ
ಅನಿರುದ್ ಜತ್ಕರ್ ಅವರು ತಮ್ಮ ಕುಟುಂಬಸ್ಥರೊಂದಿಗೆ ಜೆಪಿ ನಗರ 2ನೇ ಹಂತದ ಬೂತ್ ಸಂಖ್ಯೆ 172ರಲ್ಲಿ ಮತದಾನ ಮಾಡಿದರು.

ಜಯನಗರ 4ನೇ `ಟಿ’ ಬ್ಲಾಕ್ ನಿವಾಸಿಯಾಗಿರುವ ದಿ.ನಟ. ಡಾ. ವಿಷ್ಣುವರ್ಧನ್ #Vishnuvardhan ಅವರ ಪತ್ನಿ ಭಾರತಿ ವಿಷ್ಣುವರ್ಧನ್ #Bharathi Vishnuvardhan ಅವರು ತಮ್ಮ ಬಡಾವಣೆಯ ಬೂತ್ ಸಂಖ್ಯೆ 50ರಲ್ಲಿ ಮತದಾನ ಮಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯ ಹಬ್ಬವಾಗಿರುವ ಚುನಾವಣೆಯಲ್ಲಿ ಅರ್ಹ ಪ್ರತಿಯೊಬ್ಬರೂ ಪಾಲ್ಗೊಂಡು ಮತದಾನ ಮಾಡಬೇಕು ಎಂದು ಕರೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














Discussion about this post