ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಮುಖ್ಯಮಂತ್ರಿ ಬಸವರಾವ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಇಂದು ಮೊದಲ ಹಂತದಲ್ಲಿ ವಿಸ್ತರಣೆಯಾಗಲಿದ್ದು, ಈಬಾರಿ ಡಿಸಿಎಂ ಹುದ್ದೆಗೆ ಕೋಕ್ ನೀಡಲಾಗಿದೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಇದು ಒಟ್ಟು ೨೯ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದು, ಹೈಕಮಾಂಡ್ ಸೂಚನೆಯ ಮೇರೆಗೆ ಈಬಾರಿ ಡಿಸಿಎಂ ಹುದ್ದೆ ಇರುವುದಿಲ್ಲ. ಮುಂಬರುವ ಚುನಾವಣೆ ಹಾಗೂ ಆಡಳಿತದ ದೃಷ್ಟಿಯಿಂದ ಸಚಿವರನ್ನು ಆಯ್ಕೆ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ನಾಯಕತ್ವ, ಅಮಿತ್ ಷಾ ಅವರ ಮಾರ್ಗದರ್ಶನ ಹಾಗೂ ಜೆಪಿ ನಡ್ಡಾ ಅವರ ರಾಜಕೀಯ ಚತುರತೆ ಆಧಾರದಲ್ಲಿ ಸಚಿವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಸಂಪುಟ ವಿಸ್ತರಣೆ ವಿಚಾರದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಯಾವುದೇ ರೀತಿಯಲ್ಲಿ ಒತ್ತಡ ಹೇರಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

ಹೀಗಿದೆ ನೂತನ ಸಚಿವ ಪಟ್ಟಿ:
ಜಾತಿವಾರು ಸಚಿವ ಸ್ಥಾನ 7 ಓಬಿಸಿ, 7 ಒಕ್ಕಲಿಗ. 8 ಲಿಂಗಾಯತ, 1 ರೆಡ್ಡಿ, 3 ದಲಿತ, 1 ಎಸ್‌ಟಿ, 1 ಬ್ರಾಹ್ಮಣ, ಓರ್ವ ಮಹಿಳೆ
ಕೆ.ಎಸ್. ಈಶ್ವರಪ್ಪ, ಶಿವಮೊಗ್ಗ
ಆರಗ ಜ್ಞಾನೇಂದ್ರ, ತೀರ್ಥಹಳ್ಳಿ
ಎಮ್‌ಟಿಬಿ ನಾಗರಾಜ್, ಹೊಸಕೋಟೆ
ಬಿ.ಸಿ. ಪಾಟೀಲ್, ಹಿರೆಕೇರೂರು
ಉಮೇಶ್ ಕತ್ತಿ, ಹುಕ್ಕೇರಿ
ಹಾಲಪ್ಪ ಆಚಾರ್, ಯಲಬುರ್ಗ
ಕೆ. ಗೋಪಾಲಯ್ಯ, ಮಹಾಲಕ್ಷ್ಮೀ ಲೇಔಟ್
ಬೈರತಿ ಬಸವರಾಜ್ ಕೆ.ಆರ್. ಪುರಂ
ವಿ. ಸೋಮಣ್ಣ, ಗೋವಿಂದರಾಜ ನಗರ
ಅಶ್ವತ್ಥ ನಾರಾಯಣ, ಮಲ್ಲೇಶ್ವರಂ
ಗೋವಿಂದ ಕಾರಜೋಳ, ಮುದೋಳ
ಪಿ.ಸಿ. ನಾಗೇಶ್, ತಿಪಟೂರು
ಸುನೀಲ್ ಕುಮಾರ್, ಕಾರ್ಕಳ
ಮಾಧುಸ್ವಾಮಿ, ಚಿಕ್ಕನಾಯಕನಹಳ್ಳಿ
ಸಿಸಿ ಪಾಟೀಲ್ ನರಗುಂದ
ಮುನಿರತ್ನ, ಆರ್.ಆರ್. ನಗರ
ಎಸ್. ಅಂಗಾರ, ಸುಳ್ಯ
ಕೋಟ ಶ್ರೀನಿವಾಸ ಪೂಜಾರಿ ಎಮ್‌ಎಲ್‌ಸಿ
ಶ್ರೀರಾಮುಲು, ಮುಳಕಾಲ್ಮೂರು
ಆರ್. ಅಶೋಕ್, ಪದ್ಮನಾಭನಗರ
ಮುರುಗೇಶ್ ನಿರಾಣಿ, ಬಿಳಗಿ
ಕೆ. ಸುಧಾಕರ್, ಚಿಕ್ಕಬಳ್ಳಾಪುರ
ಎಸ್.ಟಿ. ಸೋಮಶೇಖರ್, ಯಶವಂತಪುರ
ಆನಂದ್ ಸಿಂಗ್, ವಿಜಯನಗರ
ಶಶಿಕಲಾಜೊಲ್ಲೆ, ನಿಪ್ಪಾಣಿ
ಶಿವರಾಮ್ ಹೆಬ್ಬಾರ್,
ಶಂಕರ್ ಮುನೇನಕೊಪ್ಪ, ನವಲಗುಂದ
ಪ್ರಭು ಚೌಹಾಣ್, ಔರಾದ್
ಕೆಸಿ ನಾರಾಯಣ್ ಗೌಡ – ಕೆಆರ್ ಪೇಟೆ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















