ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅಶ್ಲೀಲ ವೀಡಯೊಗಳ ಪೆನ್ ಡ್ರೈವ್ ವಿಚಾರಕ್ಕೆ ಸಂಬಂಧಿಸಿದಂತೆ ಆ ದೊಡ್ಡ ತಿಮಿಂಗಿಲ ಹಿಡಿದರೆ ಎಲ್ಲ ವಿಚಾರಗಳೂ ಹೊರಬರುತ್ತದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ #H D Kumaraswamy ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಪೆನ್ ಡ್ರೈವ್ ಬಿಡುಗಡೆ ಹಿಂದೆ ದೊಡ್ಡ ತಿಮಿಂಗಿಲವಿದೆ. ಪೆನ್ ಡ್ರೈವ್ ಹಂಚಿದವರ ವಿರುದ್ಧ ಎಸ್’ಐಟಿ ಇನ್ನೂ ಕ್ರಮ ಕೈಗೊಂಡಿಲ್ಲ. ಯಾರೊಬ್ಬರನ್ನೂ ಬಂಧಿಸಿಲ್ಲ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಿಮಿಂಗಿಲದ ಆಡಿಯೋ ಬಿಟ್ಟದ್ದಕ್ಕೇ ಕೇಸ್ ಆಗಿದೆ. ಆಡಿಯೋ ಬಿಟ್ಟವರ ಮೇಲೆಯೇ ಕೇಸ್ ಹಾಕಿ ಕೂರಿಸಿದ್ದು, ಅವರ್ಯಾರೋ ದೆಹಲಿಗೆ ತೆರಳಿ ದಾಖಲೆ ಬಿಡುಗಡೆಗೆ ಹೊರಟಿದ್ದರು ಎಂದು ಆತನನ್ನು ಹಿಡಿಯಲಾಗಿದೆ. ಯಾವ ದಾಖಲೆ ಬಿಡುಗಡೆಗೆ ಹೊರಟಿದ್ದರು? ಅವರನ್ನು ಹಿಡಿದು ಇವರು ಯಾವ ದಾಖಲೆ ವಶಪಡಿಸಿಕೊಳ್ಳಲು ಹೊರಟಿದ್ದಾರೆ? ಎಂಬುದೆಲ್ಲವೂ ಚರ್ಚೆಯಾಗಬೇಕಲ್ಲವೇ? ಪ್ರಕರಣದಲ್ಲಿ ಎಸ್’ಐಟಿ ತನಿಖೆ ಯಾವ ದಿಕ್ಕಿನಲ್ಲಿ ಹೋಗುತ್ತಿದೆ ನೋಡಿ ಎಂದು ಕಿಡಿಕಾರಿದರು.
Also read: ಮುಹೂರ್ತ ನೋಡಿ ಜೈಲಿನಿಂದ ಬಿಡುಗಡೆಯಾದ ರೇವಣ್ಣ ನೇರ ಹೋಗಿದ್ದೆಲ್ಲಿಗೆ?
ಎಸ್’ಐಟಿ #SIT ತನಿಖೆಯ ವರದಿ ಶಾಸಕರಿಗೆ ಸರಬರಾಜಾಗುತ್ತಿದೆಯೇ? ಎಂಬ ಅನುಮಾನವಿದೆ. ಪೆನ್ ಡ್ರೈವ್ ಹಿಂದೆ ದೊಡ್ಡ ತಿಮಿಂಗಿಲವಿದೆ. ಆ ತಿಮಿಂಗಿಲ ಯಾರೆಂದು ರಾಜ್ಯದ ಜನತೆಗೂ ಗೊತ್ತಿದೆ. ಅದು ಸರ್ಕಾರದಲ್ಲಿಯೇ ಇದೆ. ಆ ತಿಮಿಂಗಿಲ ಹಿಡಿದರೆ ಎಲ್ಲವೂ ಗೊತ್ತಾಗುತ್ತದೆ. ದೊಡ್ಡ ತಿಮಿಂಗಿಲ ಬಿಟ್ಟು ಇವರು ಸಣ್ಣ ಪುಟ್ಟದ್ದನ್ನು ಹಿಡಿಯಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post