ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶ್ರೀ ವ್ಯಾಸರಾಜ ಮಠ (ಸೋಸಲೆ) ಸುಬ್ರಹ್ಮಣ್ಯನಗರ ಶಾಖೆಯಲ್ಲಿ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ‘ಕಲಿಯುಗ ಕಾಮಧೇನು’ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 354ನೇ ಆರಾಧನಾ ಮಹೋತ್ಸವವನ್ನು ಆಗಸ್ಟ್ 10 ರಿಂದ 12ರ ವರೆಗೆ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ.
ಕಾರ್ಯಕ್ರಮಗಳ ವಿವರ ಹೀಗಿದೆ:
ಪೂಜಾ ಕೈಂಕರ್ಯಗಳು : ಆರಾಧನೆಯ ಮೂರೂ ದಿನಗಳಂದು ಬೆಳಗ್ಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ವಿಶೇಷ ಅಲಂಕಾರ, ಅಲಂಕಾರ ಪಂಕ್ತಿ ಸೇವಾ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿತರಣೆ, ಸಂಜೆ 5-00ಕ್ಕೆ ರಥೋತ್ಸವ, ಅಷ್ಟಾವಧಾನ, ಮಹಾಮಂಗಳಾರತಿ.
ಭಜನಾ ಕಾರ್ಯಕ್ರಮ : (ಪ್ರತಿದಿನ ಸಂಜೆ 6 ರಿಂದ 7). ಆಗಸ್ಟ್ 10-ಸುರಭಿ ಗಾನ ಮಂಡಳಿ, ಆಗಸ್ಟ್ 11-ಜಾನ್ಹವಿ ಭಜನಾ ಮಂಡಳಿ, ಆಗಸ್ಟ್ 12-ಪವಿತ್ರ ಗಾನ ವೃಂದ.
ಸಾಂಸ್ಕೃತಿಕ ಕಾರ್ಯಕ್ರಮಗಳು : (ಪ್ರತಿದಿನ ಸಂಜೆ 7 ರಿಂದ 8-30). ಆಗಸ್ಟ್ 10-“. ಹರಿದಾಸ ಮಂಜರಿ”. ಶ್ರೀಮತಿ ರೂಪಶ್ರೀ ಪ್ರಭಂಜನ (ಗಾಯನ), ಶ್ರೀ ಪಂಚಾಕ್ಷರಿ ಹಿರೇಮಠ್ (ಹಾರ್ಮೋನಿಯಂ), ಶ್ರೀ ದತ್ತಾ ಜೋಶಿ (ತಬಲಾ). 11-“ಹರಿದಾಸ ವೈಭವ”. ಶ್ರೀಮತಿ ಸುಷ್ಮಾ ಶ್ರೇಯಸ್ (ಗಾಯನ), ಶ್ರೀ ಎಂ.ಎಸ್. ಗೋವಿಂದಸ್ವಾಮಿ (ಪಿಟೀಲು), ಶ್ರೀ ಗಣೇಶ್ ಮೂರ್ತಿ (ಮೃದಂಗ). ಆಗಸ್ಟ್ 12-“ಹರಿದಾಸ ಝೇಂಕಾರ”. ಶ್ರೀ ಶಿಶಿರ ಕೆ.ಪಿ. (ಗಾಯನ), ಕು|| ಸಂಸ್ಕೃತಿ ಎಸ್. ಬಾಣಾವರ್ (ಕೀ-ಬೋರ್ಡ್), ಶ್ರೀ ಧೃವ ಆಚಾರ್ಯ (ತಬಲಾ).
ಪ್ರಶಸ್ತಿ ಪ್ರದಾನ ಸಮಾರಂಭ : ಹರಿಕಥಾ ವಿದ್ವಾನ್ ಕೀರ್ತಿಶೇಷ ಸೋಸಲೆ ನಾರಾಯಣದಾಸ್ ಅವರ ಹೆಸರಿನಲ್ಲಿ ಪ್ರತಿವರ್ಷವೂ ರಾಯರ ಆರಾಧನೆಯಂದು ಸಮಾಜ ಸೇವಾ ಧುರೀಣರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುವುದು ವಾಡಿಕೆ. ಅದೇ ರೀತಿ ಈ ವರ್ಷವೂ ಸಹ ಜನಪ್ರಿಯ ಶಾಸಕರೂ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ|| ಸಿ.ಎನ್. ಅಶ್ವತ್ಥನಾರಾಯಣ ಮತ್ತು ಜನಪ್ರಿಯ ನಗರಸಭೆ ಸದಸ್ಯರಾದ ಶ್ರೀ ಹೆಚ್. ಮಂಜುನಾಥ್ ಇವರಿಬ್ಬರಿಗೂ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಗುತ್ತಿದ್ದು, ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹರಿ ವಾಯು ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಸೋಸಲೆ ಪ್ರಕಾಶ್ ಅವರು ವಿನಂತಿಸಿದ್ದಾರೆ.
ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ವ್ಯಾಸರಾಜ ಮಠ (ಸೋಸಲೆ), #1160, 5ನೇ ಮುಖ್ಯರಸ್ತೆ, ‘ಎ’ ಬ್ಲಾಕ್, ರಾಜಾಜಿನಗರ, 2ನೇ ಹಂತ ಸುಬ್ರಹ್ಮಣ್ಯನಗರ, ಬೆಂಗಳೂರು-560010
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post