Read - < 1 minute
ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಹಾಗೂ ವರ್ದಂತಿ ಮಹೋತ್ಸವದ ಅಂಗವಾಗಿ ಕೋಣನಕುಂಟೆ ರಾಯರ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಘವೇಂದ್ರ ಸ್ವಾಮಿಗಳು ಹಾಗು ಹರಿದಾಸ ಸಾಹಿತ್ಯ ವಿಚಾರ ಗೋಷ್ಠಿ ಕಾರ್ಯಕ್ರಮಕ್ಕೆ ಸಂಸ್ಕೃತಿ ಚಿಂತಕ ಡಾ. ಪೋ. ಶೆಟ್ಟಿಹಳ್ಳಿ ಗುರುರಾಜ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಕುಂತಲಾ ದೇವಿ ಕಾಲೇಜಿನ ಪ್ರಾಂಶುಪಾಲರಾದ ಡಾ ಎಸ್. ಆರ್. ರಾಘವೇಂದ್ರ ಅವರು ವಿಜಯದಾಸರು ಚಿತ್ರಿಸಿದ ರಾಘವೇಂದ್ರ ಸ್ವಾಮಿಗಳು ಎಂಬ ವಿಷಯದ ಬಗ್ಗೆ ವಿಚಾರವನ್ನು ಮಂಡಿಸಿದರು. ನಾಡಿನ ಖ್ಯಾತ ಹರಿದಾಸ ಸಂಶೋಧಕರಾದ ಡಾ. ಅನಂತ ಪದ್ಮನಾಭ ರಾವ್ ಅವರು ಅಧ್ಯಕ್ಷತೆ ವಹಿಸಿದ್ದರು.

ಗುರು ರಾಘವೇಂದ್ರ ಸೇವಾ ಟ್ರಸ್ಟ್ ಕೋಣನಕುಂಟೆಯ ಕಾರ್ಯದರ್ಶಿಗ ಪಿ.ಎನ್. ಫಣಿ ಕುಮಾರ್ ಸ್ವಾಗತಿಸಿ, ಪರಗಿ ಭಾರತಿ ರಮಣಾಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post