ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಜೈಲಿನಲ್ಲಿ ನಟ ದರ್ಶನ್ #Darshan ಅವರಿಗೆ ರಾಜಾತಿಥ್ಯ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳು ಬಹಿರಂಗಗೊಂಡಿವೆ.
Also read: ಜನ್ಮಕೊಟ್ಟ ಮಗುವನ್ನೇ ಅತ್ಯಂತ ಕ್ರೂರವಾಗಿ ಕೊಂದ ತಾಯಿ | ಕಾರಣವೇನು? ನಂತರ ಮಾಡಿದ್ದೇನು?
ದರ್ಶನ್ ಫೋಟೋ ವೈರಲ್ ಬಗ್ಗೆ ತನಿಖಾ ತಂಡ ಮಾಹಿತಿ ಕಲೆ ಹಾಕಿದ್ದು, ನಟ ದರ್ಶನ್ ತಾನಾಗಿಯೇ ಹೋಗಿ ವಿಲ್ಸನ್ ಗಾರ್ಡನ್ ನಾಗ #Wilson garden Naga ಜೊತೆಗೆ ಕುಳಿತಿರಲಿಲ್ಲ. ದರ್ಶನ್ ವಾಕಿಂಗ್ ಮಾಡುತ್ತಿದ್ದ ವೇಳೆ ನಾಗನೇ ಕರೆದಿದ್ದ ಎನ್ನಲಾಗಿದೆ.
ನಾಗ ಕಾಫಿ ತೆಗೆದುಕೊಳ್ಳಲು ಹೇಳಿದ್ದಾನೆ. ಈ ವೇಳೆ ನನಗೆ ಕಾಫಿ ಬೇಡ, ಬಿಸಿ ನೀರು ಸಾಕು ಎಂದು ದರ್ಶನ್ ಹೇಳಿದ್ರಂತೆ, ಹಾಗಾಗಿ ಮಗ್ ನಲ್ಲಿ ಬಿಸಿನೀರು ತರಿಸಿಕೊಡಲಾಗಿತ್ತಂತೆ. ನಾಗನ ಜೊತೆಗೆ ಸುಮ್ಮನೆ ಕುಳಿತಿದ್ದಾಗಿ ನಟ ದರ್ಶನ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಇನ್ನೂ ಜೈಲಿನಲ್ಲಿ ಸಿಗರೇಟ್ ನೀಡಿರುವುದು ನಾಗ ಅಂತ ನಟ ದರ್ಶನ್ ಮಾಹಿತಿ ನೀಡಿದ್ದಾರೆನ್ನಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯ ನೀಡಿರುವ ವಿಚಾರವಾಗಿ ಇಂದಿನಿಂದ ಪೊಲೀಸರು ಮತ್ತೆ ತನಿಖೆ ನಡೆಸಲಿದ್ದಾರೆ. ಬೇಗೂರು ಇನ್ಸ್ಪೆಕ್ಟರ್ ಕೃಷ್ಣಕುಮಾರ್ ಲಾನ್ ನಲ್ಲಿ ನಟ ದರ್ಶನ್ ಕುಳಿತಿದ್ದ ವಿಚಾರಕ್ಕೆ ಸಂಬಂಧಿಸಿ ತನಿಖೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post