ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಹೊಸಪೇಟೆ |
ತುಂಗಭದ್ರಾ ಜಲಾಶಯದ #Tunga Bhadra Dam 19ನೇ ಕ್ರಸ್ಟ್ ಗೇಟಿನ ಸರಪಳಿ ತುಂಡಾಗಿದ್ದು, ಯಾರೂ ಗಾಬರಿಪಡಬೇಕಿಲ್ಲ. ಕಳೆದ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹೀಗಾಗಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ದುರಸ್ತಿ ಕಾರ್ಯಗಳನ್ನು ಪೂರ್ಣಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ #D K Shivakumar ಮಾಹಿತಿ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕೂಡ ತುಂಗಭದ್ರಾ (ಟಿಬಿ ಡ್ಯಾಮ್) ಜಲಾಶಯಕ್ಕೆ ಹೋಗಿ ಭೇಟಿ ಮಾಡಿ ಬಂದಿದ್ದೇನೆ. ಅಲ್ಲಿ ಆಗಿರುವ ಸಮಸ್ಯೆಯನ್ನು ದುರಸ್ತಿಪಡಿಸಲು ಕ್ರಮ ತೆಗೆದುಕೊಂಡಿದ್ದೇವೆ. ಜಲಾಶಯ ನಿರ್ಮಾಣ ಮಾಡುವಂತಹ ಎಲ್ಲಾ ಗುತ್ತಿಗೆದಾರರ ಜೊತೆ ಮಾತಾಡಿದ್ದೇನೆ. ಟಿಬಿ ಡ್ಯಾಮ್‌ಗೆ ಸಂಬಂಧಪಟ್ಟಂತಹ ಡಿಸೈನ್‌ಗಳನ್ನು ಅವರಿಗೆ ಕಳುಹಿಸಿಕೊಟ್ಟಿದ್ದು, ಕೂಡಲೇ ದುರಸ್ತಿಗೆ ಯೋಜನೆ ರೂಪಿಸಿಕೊಂಡು ಇನ್ನೊಂದು ನಾಲ್ಕೈದು ದಿನಗಳಲ್ಲಿ ರಿಪೇರಿ ಮಾಡುವಂತದ್ದು ಆಗಲಿದೆ ಎಂದು ತಿಳಿಸಿದರು.

Also read: ಸ್ಯಾಂಡಲ್‌ವುಡ್ ಉಳಿವಿಗಾಗಿ ಆ.13,14ರಂದು ವಿಶೇಷ ಪೂಜೆ
ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಿಂದ ಸೋಮವಾರ ಬೆಳಿಗ್ಗೆಯಿಂದ ಭಾರೀ ಪ್ರಮಾಣದ ನೀರನ್ನು ಹೊರಹರಿಸಲಾಗುತ್ತಿದ್ದು, ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ನಿವಾಸಿಗಳಿಗೆ ಕಟ್ಟೆಚ್ಚರದಿಂದ ಇರುವಂತೆ ಸೂಚಿಸಲಾಗಿದೆ.

ಆದರೆ ಕ್ರಸ್ಟ್ ಗೇಟ್ ದುರಸ್ತಿಗೆ ಡ್ಯಾಂನಲ್ಲಿನ ಅರ್ಧದಷ್ಟು ನೀರು ಖಾಲಿ ಮಾಡಬೇಕಾದ ಸ್ಥಿತಿಯಿದೆ. ಕಳೆದ ಎರಡು ವರ್ಷದಿಂದ ಡ್ಯಾಂ ಭರ್ತಿಯಾಗಿರಲಿಲ್ಲ. ಪ್ರಸ್ತುತ ವರ್ಷ ಮಲೆನಾಡು ಭಾಗದಲ್ಲಿ ಬಿದ್ದ ಭಾರೀ ಮಳೆಯಿಂದ ತುಂಗಾಭದ್ರಾ ಜಲಾಶಯ ನಿಗದಿತ ಅವಧಿಗೂ ಮೊದಲೇ ಗರಿಷ್ಠ ಮಟ್ಟ ತಲುಪಿತ್ತು.
ಭಾನುವಾರ ರಾತ್ರಿಯಿಂದಲೇ ಜಲಾಶಯದಿಂದ 33 ಕ್ರಸ್ಟ್ ಗೇಟ್ ಗಳ ಮೂಲಕ ನೀರು ಹೊರ ಬಿಡಲಾಗುತ್ತಿದೆ. ಸೋಮವಾರ ಬೆಳಿಗ್ಗೆಯಿಂದ ಈ ಪ್ರಮಾಣದಲ್ಲಿ ಮತ್ತಷ್ಟು ಏರಿಕೆಯಾಗಿದೆ. 1.50 ಲಕ್ಷ ಕ್ಯೂಸೆಕ್ ಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇದರಿಂದ ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post