ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಿಯಲ್‌ಸ್ಟಾರ್ ಉಪೇಂದ್ರ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು ನಗರದ ವಾತ್ಸಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ವದಂತಿಗೆ ಸ್ವತಃ ಉಪೇಂದ್ರ Upendra ಅವರೇ ಸ್ಪಷ್ಟೀಕರಣ ನೀಡಿದ್ದಾರೆ.
ಡಸ್ಟ್ ಅಲರ್ಜಿಯಿಂದಾಗಿ ಉಸಿರಾಟದ ತೊಂದರೆ ಕಾಣಿಸಿಕೊಂಡ ಪರಿಣಾಮ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ವದಂತಿಗಳು ಹಬ್ಬಿದ ಹಿನ್ನೆಲೆಯಲ್ಲಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಶೂಟಿಂಗ್ ಸೆಟ್‌ನಿಂದ ಇಡೀ ತಂಡದೊಂದಿಗೆ ಫೆಸ್‌ಬುಕ್ ಲೈವ್ ಮಾಡಿ ಸ್ಪಷ್ಟನೆ ನೀಡಿರುವ ಉಪೇಂದ್ರ ನನಗೇನೂ ಆಗಿಲ್ಲ. ಆರೋಗ್ಯದಿಂದ ಇದ್ದೇನೆ. ಕಬ್ಜ ಸಿನಿಮಾದ ಶೂಟಿಂಗ್ ವೇಳೆ ಕೆಮ್ಮು ಬಂದ ಕಾರಣ ಈ ವದಂತಿ ಹಬ್ಬಿದೆ. ಹಿತೈಷಿಗಳ ಸಲಹೆಯಂತೆ ಆಸ್ಪತ್ರೆಯಲ್ಲಿ ಕೇವಲ ನಾರ್ಮಲ್ ತಪಾಸಣೆ ಮಾಡಿಸಿದ್ದೇನೆ. ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಸೆಟ್‌ಗೆ ಆಗಮಿಸಿದ್ದೇನೆ. ನಾನು ಆರೋಗ್ಯವಾಗಿದ್ದು, ಯಾರೂ ಆತಂಕಪಡುವುದು ಬೇಡ ಎಂದಿದ್ದಾರೆ.
Also read: ನೂತನ ಅಂಗನವಾಡಿ ಕಟ್ಟಡ ಹಾಗೂ 40 ಲಕ್ಷ ರೂ.ಗಳ ಬಾಕ್ಸ್ ಚರಂಡಿ ಕಾಮಗಾರಿಗೆ ಶಾಸಕ ಈಶ್ವರಪ್ಪ ಗುದ್ದಲಿ ಪೂಜೆ












Discussion about this post