ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತಿರುವನಂತಪುರಂ ನಾರ್ತ್ ಮತ್ತು ಎಸ್ಎಂವಿಟಿ ಬೆಂಗಳೂರು ನಡುವೆ ಸಂಚರಿಸುವ ಹಮ್ ಸಫರ್ ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲುಗಳಿಗೆ (ಸಂಖ್ಯೆ 16319/16320) ಕಾಯಂಕುಳಂ ಜಂಕ್ಷನ್ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ನಿಲುಗಡೆ ನೀಡಲು ದಕ್ಷಿಣ ರೈಲ್ವೆಯು ಸೂಚಿಸಿದೆ.
ಈ ನಿಲುಗಡೆಯ ಸೌಲಭ್ಯವು ನವೆಂಬರ್ 1, 2025 ರಿಂದ ತಮ್ಮ ಪ್ರಯಾಣವನ್ನು ಆರಂಭಿಸುವ ರೈಲು ಸಂಖ್ಯೆ 16319 (ತಿರುವನಂತಪುರಂ ನಾರ್ತ್–ಎಸ್ಎಂವಿಟಿ ಬೆಂಗಳೂರು) ರೈಲಿಗೆ ಅನ್ವಯವಾಗಲಿದೆ. ಹಾಗೆಯೇ, ವಾಪಸಾತಿ ಮಾರ್ಗದಲ್ಲಿ, ನವೆಂಬರ್ 2, 2025 ರಿಂದ ಪ್ರಯಾಣ ಪ್ರಾರಂಭಿಸುವ ರೈಲು ಸಂಖ್ಯೆ 16320 (ಎಸ್ಎಂವಿಟಿ ಬೆಂಗಳೂರು–ತಿರುವನಂತಪುರಂ ನಾರ್ತ್) ರೈಲಿಗೂ ಸಹ ಅನ್ವಯವಾಗಲಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post