ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಯಾವುದೇ ಮದರಸಾಗಳಲ್ಲಿ ದೇಶದ್ರೋಹದ ಪಾಠ ಬೋಧಿಸುವುದಿಲ್ಲ. ಭಾವೈಕ್ಯತೆ, ದೇಶಪ್ರೇಮ ಹಾಗೂ ಸಹಭಾಳ್ವೆಯ ಪಾಠ ಮಾಡಲಾಗುತ್ತದೆ. ಒಂದು ವೇಳೆ ದೇಶದ್ರೋಹದ ಪಾಠ ಮಾಡುವುದು ನಮ್ಮ ಗಮನಕ್ಕೆ ಬಂದರೆ ಅದನ್ನು ನಾವೇ ಬ್ಯಾನ್ ಮಾಡುತ್ತೇವೆ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಶಾಫೀ ಸ ಅದಿ ಹೇಳಿದ್ದಾರೆ.
ಮದರಸಾಗಳಿಗೆ ಕಡಿವಾಣ ಹಾಕಲು ಶಿಕ್ಷಣ ಇಲಾಖೆ ಮುಂದಾಗಿದ್ದು, ಮದರಸಾಗೆ ಮಂಡಳಿ ರಚನೆ ಮಾಡುವ ಬಗ್ಗೆ ಸಿದ್ಧತೆಯನ್ನೂ ನಡೆಸಿದೆ. ಅದಕ್ಕಾಗಿ ಇನ್ನು 15 ದಿನಗಳಲ್ಲಿ ವರದಿ ತರಿಸಿಕೊಳ್ಳುವಂತೆ ಸೂಚನೆ ನೀಡಿದೆ. ಸರ್ಕಾರದ ಈ ನಿರ್ಧಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಮದರಸಾಗಳು ಇರೋದು ವಕ್ಫ್ ಬೋರ್ಡ್ ಅಧೀನದಲ್ಲಿ. ಸರ್ಕಾರದ ಸಭೆ ಮಾಡಿರುವುದು, ನಿರ್ಧಾರ ಕೈಗೊಂಡಿರುವುದು ಯಾವುದೂ ನಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post