ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಏಳು ವರ್ಷದ ಒಳಗಿನ ಮಕ್ಕಳಿಗೆ ಕಿವುಡತನ ಸಮಸ್ಯೆ ಇದ್ದರೆ ಅದರ ನಿವಾರಣೆಗೆ ಕೇಂದ್ರ ಸರ್ಕಾರದ ದಿವ್ಯಾಂಗ ಹಾಗೂ ಸಾಮಾಜಿಕ ಸಬಲೀಕರಣ ಇಲಾಖೆಯಿಂದ ಎಂಟು ಲಕ್ಷ ರೂಪಾಯಿವರೆಗೆ ಸಹಾಯ ಧನ ನೀಡಲಾಗುತ್ತದೆ ಎಂದು ಕೇಂದ್ರ ಸಾಮಾಜಿಕ ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣ ಸ್ವಾಮಿ A Narayana Swamy ಹೇಳಿದರು.
ಸೇವಾ ಇನ್ ಆಕ್ಷನ್ ನಿಂದ ಆಯೋಜಿಸಲಾಗಿದ್ದ ದಿವ್ಯಾಂಗ ಮಕ್ಕಳಿಗಾಗಿ ರಾಷ್ಟ್ರೀಯ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮದಲ್ಲಿ ವಿಜೇತರಿಗೆ ಭಾಗವಹಿಸಿ ಬಹುಮಾನ ವಿತರಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಹುಟ್ಟುವಾಗಲೇ ಕಿವುಡತನ ಸಮಸ್ಯೆ ಉಂಟಾಗುತ್ತವೆ. ಇದರ ನಿವಾರಣೆ, ಚಿಕಿತ್ಸೆಗೆ ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ನೀಡಲಾಗುತ್ತದೆ. ಈ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.
ಅಂಗವೈಕಲ್ಯತೆ ದೇವರು ಫಲಿಸುವ ಶಾಪ ಎಂದು ಯಾರೂ ಭಾವಿಸ ಬಾರದು ಇದು ಗರ್ಭಾವಸ್ಥೆಯಲ್ಲಿ ಪೋಷಕರು, ವೈದ್ಯರ ನಿರ್ಲಕ್ಷ್ಯ ತನದಿಂದ ಉಂಟಾಗುವದಾಗಿದೆ. ನಾವು ಇಂದು ಬಳಸುವ ಆಹಾರ ಪದ್ಧತಿಯಿಂದ ಬರಲಿದೆ ಎಂದರು.
Also Read: Country’s first 31-meter U-girder successfully cast for BSRP
ಪ್ರಧಾನಿ ನರೇಂದ್ರ ಮೋದಿ PM Narendra Modi ನೇತೃತ್ವದ ಕೇಂದ್ರ ಸರ್ಕಾರ ದಿವ್ಯಾಂಗರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿ ತಂದಿದೆ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ. ದಿವ್ಯಾಂಗರ ಸೇವೆ ಸಮಾಜಿಕ ಸಂಸ್ಥೆಗಳಿಗೆ ಅಗತ್ಯ ನೆರವು ನೀಡಲಾಗುತ್ತದೆ ಈ ಕುರಿತಂತೆ ಜನರಲ್ಲಿ ಹೆಚ್ಚು ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಸೇವಾ ಇನ್ ಆಕ್ಷನ್ ಸಂಸ್ಥೆಯ ಉಪಾಧ್ಯಕ್ಷೆ ರುಮಾ ಬ್ಯಾನರ್ಜಿ ಮಾತನಾಡಿ, ಕಳೆದ ಒಂಬತ್ತು ವರ್ಷಗಳಿಂದ ದಿವ್ಯಾಂಗ ಮಕ್ಕಳಿಗಾಗಿ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿಕೊಂಡು ಬರಲಾಗುತ್ತದೆ. ಈ ಬಾರೀ ವಿವಿಧ ರಾಜ್ಯಗಳಿಂದ 300ಕ್ಕೂ ಅಧಿಕ ಮಕ್ಕಳು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿರುವ ದಿವ್ಯಾಂಗ ಮಕ್ಕಳನ್ನು ಹೆಚ್ಚು ಭಾಗವಹಿಸುವಂತೆ ನಮ್ಮ ಸಂಸ್ಥೆ ಕಾರ್ಯನಿರ್ವಹಿಸಲಿದೆ ಎಂದರು.
ದೂರದರ್ಶನದ ಥಟ್ ಅಂತ ಹೇಳಿ ಕಾರ್ಯಕ್ರಮದ ನಿರೂಪಕ ನಾ. ಸೋಮೇಶ್ವರ್, ಸಾಮಾಜಿಕ ಸಬಲೀಕರಣ ಇಲಾಖೆಯ ಅಧಿಕಾರಿ ಡಾ. ಯಮುನಾ, ಎಲ್’ಟಿ ಮೈಂಡ್ ಟ್ರೀ ಸಂಸ್ಥೆಯ ರಮೇಶ್ ಬೇಗೂರು, ಕಾರ್ಯದರ್ಶಿ ರಾಜಶೇಖರ ರೆಡ್ಡಿ ಮತ್ತಿತರರು ಭಾಗವಹಿಸಿದ್ದರು
(ವರದಿ: ಡಿ.ಎಲ್. ಹರೀಶ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post