ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರು ಜೆಪಿ ನಗರ ಆರನೇ ಹಂತದ ಇಮೇಜ್ ಆಂಗ್ಲ ಶಾಲೆಯಲ್ಲಿ ನಡೆದ 67ನೇ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಕನ್ನಡ ಧ್ವಜಾರೋಹಣ ನೆರವೇರಿಸಿ ,ತಾಯಿ ಭುವನೇಶ್ವರಿಯ ಚಿತ್ರಪಟಕ್ಕೆ ಪುಷ್ಪಾರ್ಚನೆ ಸಲ್ಲಿಸಿ ,ಜ್ಯೋತಿ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿದ್ಯಾರ್ಥಿಗಳಿಂದ ಪಥಸಂಚಲನ ಗೌರವ ವಂದನೆಯನ್ನು ಸ್ವೀಕರಿಸಿದರು . ನಾಡಗೀತೆಯೊಂದಿಗೆ ರೈತ ಗೀತೆಯನ್ನು ಪ್ರಸ್ತುತಪಡಿಸಿದ್ದು ವಿಶೇಷವಾಗಿತ್ತು.

ಕೇವಲ ನವೆಂಬರ್ ಒಂದರಂದು ಮಾತ್ರ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸದೆ ಅದು ನಿತ್ಯೋತ್ಸವವಾಗಬೇಕು ಎಂದು ಅಭಿಪ್ರಾಯಪಟ್ಟರು.
Also read: ಕೇಂದ್ರದ ಸಿಬ್ಬಂದಿ ಆಯ್ಕೆ ಆಯೋಗದಿಂದ ಪೇದೆ ಹುದ್ದೆ ಆಯ್ಕೆಗೆ ಹಿಂದಿ, ಇಂಗ್ಲೀಷ್ ನಲ್ಲಿ ಪರೀಕ್ಷೆ: ಹೆಚ್‌ಡಿಕೆ ಆಕ್ರೋಶ
ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು ,ಶಾಲಾ ಗ್ರಂಥಾಲಯಕ್ಕೆ ಅಕ್ಷರ ದಾಸೋಹವಾಗಿ ಕೆಲವು ಕನ್ನಡದ ಪುಸ್ತಕಗಳನ್ನು ನೀಡಲಾಯಿತು.
ಹಿರಿಯ ಶಿಕ್ಷಣ ತಜ್ಞ ಎಲ್. ಸತ್ಯನಾರಾಯಣ, ಶಾಲೆಯ ಸಂಸ್ಥಾಪಕ ಪ್ರಾಚಾರ್ಯ ಪಿ.ವಿ. ರವೀಂದ್ರನಾಥ್ ಮೊದಲಾದವರು ಉಪಸ್ಥಿತರಿದ್ದರು.












Discussion about this post