ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಹೊಂಬಾಳೆ ಫಿಲಮ್ಸ್ #Hombale Films ನಿರ್ಮಾಣದ ಬಹು ನಿರೀಕ್ಷಿತ ಕಾಂತಾರ 1 #Kantara 1 ಚಿತ್ರದ ಟ್ರೇಲರ್ ಅಬ್ಬರ ಯೂಟ್ಯೂಬ್’ನಲ್ಲಿ ಜೋರಾಗಿದ್ದು, ಚಿತ್ರದ ಕುರಿತಾಗಿನ ನಿರೀಕ್ಷೆ ಇಮ್ಮಡಿಗೊಂಡಿದೆ.
ವಿವಿಧ ಭಾಷೆಗಳಲ್ಲಿ ಮಿಲಿಯನ್’ಗಟ್ಟಲೆ ವೀಕ್ಷಣೆ ಕಂಡಿರುವ ಈ ಟ್ರೇಲರ್ ಭಾರೀ ಕುತೂಹಲವನ್ನು ಹೆಚ್ಚಿಸಿದ್ದು, ಚಿತ್ರದ ಬಿಡುಗಡೆಗಾಗಿ ಕಾಯುವಂತೆ ಮಾಡಿದೆ.
ಮಾಂಸಾಹಾರ ಸೇವಿಸದೇ ಈ ಸಿನಿಮಾ ನೋಡಬೇಕಾ?
ಒಂದೆಡೆ ಕಾಂತಾರ-1 ಟ್ರೇಲರ್ ಅಬ್ಬರಿಸುತ್ತಿದ್ದರೆ ಇನ್ನೊಂದೆಡೆ ಈ ಕುರಿತ ಪೋಸ್ಟ್ ಒಂದು ವೈರಲ್ ಆಗಿದ್ದು, ಪರ ವಿರೋಧದ ಚರ್ಚೆ ನಡೆಯುತ್ತಿದೆ.
‘ಕಾಂತಾರ ಪರ್ವ’ ಹೆಸರು ಟ್ವಿಟ್ಟರ್ ಪೇಜ್’ನಲ್ಲಿ ಕೆಲವು ದಿನಗಳ ಹಿಂದೆ ಒಂದು ಪೋಸ್ಟ್ ಮಾಡಲಾಗಿದ್ದು, ‘ಮದ್ಯಪಾನ, ಧೂಮಪಾನ ಮಾಡಬಾರದು ಹಾಗೂ ಮಾಂಸಾಹಾರ ಸೇವಿಸದೇ ಬಂದು ಕಾಂತಾರ- 1 ಸಿನಿಮಾ ನೋಡುವ ಸಂಕಲ್ಪ ಮಾಡಿಕೊಳ್ಳೋಣ ಎಂದು ಅದರಲ್ಲಿ ಬರೆಯಲಾಗಿತ್ತು.
ಈ ಪೋಸ್ಟ್ ಕುರಿತಾಗಿ ಬಹಳಷ್ಟು ಪರ ವಿರೋಧದ ಚರ್ಚೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ರಿಷಬ್ ಶೆಟ್ಟಿ, ಊಟೋಪಚಾರ ಹಾಗೂ ಅವರವರ ಅಭ್ಯಾಸಗಳನ್ನು ಯಾರು ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಎಲ್ಲವೂ ಅವರವರ ಸ್ವಂತ ವಿವೇಚನೆಗೆ ಬಿಟ್ಟ ವಿಚಾರ. ಯಾರೋ ಫೇಕ್ ಪೋಸ್ಟ್ ಹಾಕಿರುವುದು ಅದು. ನಮ್ಮ ಗಮನಕ್ಕೂ ಬಂತು. ಆದರೆ ಅದನ್ನು ನಮ್ಮ ತಂಡಕ್ಕೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.
‘ಕಾಂತಾರ 1’ ಇಡೀ ದೇಶವೇ ಎದುರು ನೋಡುತ್ತಿರುವ ಸಿನಿಮಾ. ಹೀಗಾಗಿ ಕಳೆದ ಮೂರು ತಿಂಗಳಿನಿಂದ ಇಡೀ ತಂಡ ಕೇವಲ ಎರಡು-ಮೂರು ಗಂಟೆ ಕೆಲಸ ಮಾಡಿದೆ. ನಾಲ್ಕೈದು ಬಾರಿ ಸತ್ತು ಹೋಗಿ ಬಿಡಬೇಕಿತ್ತು. ಆದರೆ ಬದುಕಿ ಬಂದಿದ್ದೇನೆ. ಅದಕ್ಕೆ ದೈವ ನನ್ನ ಹಿಂದೆ ನಿಂತಿದೆ ಅನ್ನೋದೇ ಸಾಕ್ಷಿ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post