ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದೇಶ ವಿದೇಶಗಳಲ್ಲಿ ಈಗಾಗಲೇ ಇನ್ನಿಲ್ಲದಂತೆ ದಾಖಲೆ ಬರದು ಮುನ್ನುಗ್ಗುತ್ತಿರುವ ಕಾಂತಾರ ಚಾಪ್ಟರ್ 1 ಚಿತ್ರ ಬುಕ್ ಮೈ ಶೋನಲ್ಲೂ #Book My Show ಸಹ ಹೊಸ ಮೈಲಿಗಲ್ಲು ಸಾಧಿಸಿದೆ.
ಕಾಂತಾರ ಚಾಪ್ಟರ್ 1 #Kantara Chapter-1 ಚಿತ್ರವನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಫಿಲಮ್ಸ್ ಅಧಿಕೃತ ಮಾಹಿತಿಯಂತೆ ಚಿತ್ರ ವಿಶ್ವದಾದ್ಯಂತ ಈಗಾಗಲೇ 650 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಈಗ ಆನ್’ಲೈನ್ ಟಿಕೇಟ್ ಬುಕ್ಕಿಂಗ್ ಪ್ಲಾಟ್’ಫಾರಂ ಬುಕ್ ಮೈ ಶೋನಲ್ಲೂ ಸಹ ಹೊಸ ದಾಖಲೆ ಬರೆದಿದೆ.
ಅ.2ರಂದು ಬಿಡುಗಡೆಯಾದ ದಿನದಿಂದ ಈವರೆಗೂ ಬುಕ್ ಮೈ ಶೋನಲ್ಲಿ ಸುಮಾರು 1 ಕೋಟಿಗೂ ಅಧಿಕ ಟಿಕೇಟ್ ಮಾರಾಟವಾಗಿದೆ ಎಂದು ವರದಿಯಾಗಿದೆ.
ಚಿತ್ರ ಬಿಡುಗಡೆಯಾಗಿ 10 ದಿನವಾದರೂ ಸಹ ಈಗಲೂ ಎಲ್ಲಾ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ. ಅದರಲ್ಲೂ ಶನಿವಾರ ಹಾಗೂ ಭಾನುವಾರ ಟಿಕೇಟ್’ಗೆ ಹೆಚ್ಚಿನ ಬೇಡಿಕೆಯಿದ್ದು, ಟಯರ್ 2 ಮತ್ತು ಟಯರ್ 3 ನಗರಗಳಲ್ಲಿ ಥಿಯೇಟರ್ ಈಗಲೂ ಭರ್ತಿಯಾಗುತ್ತಿರುವುದು ಚಿತ್ರ ಉತ್ತಮ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ.
ಇನ್ನು, ಕನ್ನಡ ಮಾತ್ರವಲ್ಲದೇ ಹಿಂದಿಯಲ್ಲೂ ಸಹ ಕರ್ನಾಟಕಕ್ಕೆ ಸರಿಸಮವಾಗಿ ಚಿತ್ರ ಪ್ರದರ್ಶನ ಕಾಣುತ್ತಿದೆ. ಇದರಿಂದಾಗಿ ಹಿಂದಿ ಕಲೆಕ್ಷನ್ 100 ಕೋಟಿ ರೂ. ಗಡಿ ದಾಟಿದೆ. ಶುಕ್ರವಾರ 7.10 ಕೋಟಿ ರೂ. ಶನಿವಾರ 14.37 ಕೋಟಿ ರೂ. ಗಳಿಸುವ ಮೂಲಕ ಒಟ್ಟು 131.57 ಕೋಟಿ ರೂ. ಗಳಿಸಿದೆ.
ಅಲ್ಲದೇ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ಸಹ ಪ್ರತಿನಿತ್ಯ ಕೋಟಿ ಕೋಟಿ ರೂ. ಗಳಿಸುತ್ತಾ ಮುನ್ನುಗ್ಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post