ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕನ್ನಡದ ಸೂಪರ್ ಹಿಟ್ ಚಲನಚಿತ್ರ ಕಾಂತಾರಾದ Kantara ಸ್ಟಿಲ್ ಅನ್ನು ‘ಅದ್ಭುತ ಕಾಂತಾರ’ ಎಂಬ ಶೀರ್ಷಿಕೆಯಡಿ ಅಂತಾರಾಷ್ಟ್ರೀಯ ಮ್ಯಾಗಜಿನ್ ಪ್ರತಿಷ್ಠಿತ ಫ್ರಂಟ್‍ಲೈನ್ Frontline ಕವರ್ ಪೇಜ್‍ನಲ್ಲಿ ಬಳಸಲಾಗಿದೆ.
1984ರಿಂದ ಈವರೆಗೆ ಯಾವುದೇ ಕನ್ನಡ ಚಿತ್ರದ ಫೋಟೋಗಳು ಫ್ರಂಟ್‍ಲೈನ್ ಮ್ಯಾಗಜಿನ್‍ನ ಮುಖಪುಟದಲ್ಲಿ ಬಂದಿರಲಿಲ್ಲ ಎನ್ನುವುದು ವಿಶೇಷವಾಗಿದ್ದು, ಕಾಂತಾರ ಸಿನಿಮಾ ಈವರೆಗೂ ಅಂದಾಜು 350 ಕೋಟಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ.
Also read: ಭದ್ರಾವತಿ: ನ.19ರಂದು ಕಂಬದಾಳ್ ಹೊಸೂರ್ ಗ್ರಾಮದಲ್ಲಿ ವಿದ್ಯುತ್ ಅದಾಲತ್
ಕರ್ನಾಟಕವೊಂದರಲ್ಲಿ 150 ಕೋಟಿಗೂ ಅಧಿಕ ಹಣ ಗಳಿಕೆ ಮಾಡಿದ್ದು, ಇನ್ನೇನು ಸದ್ಯದಲ್ಲೇ ಬಾಲಿವುಡ್ ನಲ್ಲೂ 100 ಕೋಟಿ ಕ್ಲಬ್ ಸೇರಲಿದೆ ಎಂದು ತಿಳಿದುಬಂದಿದೆ.
ಕನ್ನಡ, ಹಿಂದಿ, ತಮಿಳು ಹಾಗೂ ತೆಲುಗಿನ ನಂತರ ಮಲಯಾಳಂನಲ್ಲೂ ಉತ್ತಮ ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post