ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಮ್ಮ ಸರ್ಕಾರ ಶಕ್ತಿ ಯೋಜನೆಯಿಂದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ Shakti Yojane KSRTC ಆರ್ಥಿಕವಾಗಿ ಸಹಾಯವಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ CM Siddaramaiah ಹೇಳಿದ್ದಾರೆ.
ಈ ಕುರಿತಂತೆ ಸದನದಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ 7 ಕೋಟಿ ಜನರಲ್ಲಿ ಶೇ. 50 ರಷ್ಟು ಮಹಿಳೆಯರಿದ್ದಾರೆ. 2011ರ ಜನಗಣತಿಯ ಪ್ರಕಾರ ಮಹಿಳೆಯರು ಕಡಿಮೆ ಇದ್ದರು. ಆದರೆ ಈಗ ಕೆಲ ವರದಿಗಳ ಪ್ರಕಾರ ಅಸಮಾನತೆ ಕಡಿಮೆಯಾಗುತ್ತಿದೆ ಎಂದರು.
ಎಲ್ಲ ಮಹಿಳೆಯರೂ ಖುಷಿಯಾಗಿದ್ದಾರೆ. ಇದುವರೆಗೆ ಶಕ್ತಿ ಯೋಜನೆಯ ಮೂಲಕ 18 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ವಿದ್ಯಾರ್ಥಿಗಳಿಗೆ, ಪುರುಷರಿಗೆ ತೊಂದರೆಯಾಗುತ್ತಿದೆ ಎಂದು ಟೀಕಿಸಿದರು. 13 ಸಾವಿರ ಜನ ಕಂಡಕ್ಟರ್, ಸಾರಿಗೆ ಸಿಬ್ಬಂದಿ ನೇಮಕ ಹಾಗೂ 4000 ಬಸ್ ಖರೀದಿಸಲು ಸರ್ಕಾರ ತೀರ್ಮಾನಿಸಿದೆ. ಅವರು ಪ್ರಯಾಣಿಸಿದಾಗ, ಪ್ರವಾಸೋದ್ಯಮ, ಉದ್ಯೋಗ ಹೆಚ್ಚಾಗುತ್ತಿದೆ ಎಂದರು.
ಒಂದು ದಿನಕ್ಕೆ 49.6 ಲಕ್ಷ ಪ್ರಯಾಣಿಸುತ್ತಿದ್ದಾರೆ. 28 ಕೋಟಿ 94 ಲಕ್ಷ , 4.72 ಕೋಟಿ ರೂ. ದಿನಕ್ಕೆ ಆದಾಯ ಜಾಸ್ತಿಯಾಗಿದೆ. ಮಹಿಳೆಯರೂ ಆರ್ಥಿಕ ಚಟುವಟಿಕೆಯಲ್ಲಿ ಭಾಗವಾಗಬೇಕು. ಯಾರ ಕೈಯಲ್ಲಿ ದುಡ್ಡಿಲ್ಲವೋ, ಅಂತಹವರ ಕೈಗೆ ದುಡ್ಡು ಸಿಗಬೇಕು. ಮಹಿಳೆಯರು ಸಾವಿರಾರು ಕಾಲ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಮಹಿಳೆಯರಿಗೆ, ದಲಿತರಿಗೆ, ಬಡವರಿಗೆ ಆರ್ಥಿಕ ಸಬಲತೆ ತರುವ ಉದ್ದೇಶದಿಂದ ಇಂತಹ ಯೋಜನೆಗಳನ್ನು ಜಾರಿಗೆ ತಂದಿದೆ. ಶಕ್ತಿ ಯೋಜನೆ ಬಹಳ ಯಶಸ್ವಿಯಾಗಿ ಜಾರಿಯಾಗುತ್ತಿದೆ. ಈಗಾಗಲೇ 3 ಗ್ಯಾರೆಂಟಿ ಜಾರಿಯಲ್ಲಿವೆ. ಇದಕ್ಕೆ 4000 ಕೋಟಿ ಶಕ್ತಿ ಯೋಜನೆಗೆ ಖರ್ಚಾಗುತ್ತಿವೆ. ಈ ವರ್ಷ ಉಳಿದ ಅವಧಿಗೆ 2,800 ರಿಂದ 3000 ಕೋಟಿ ವೆಚ್ಚವಾಗಲಿದೆ. ಕೆಎಸ್’ಆರ್’ಟಿಸಿ ಯೂ ಕೂಡ ಸುಧಾರಿಸುತ್ತಿದೆ ಎಂದರು.
ಗೃಹ ಜ್ಯೋತಿ
ಜುಲೈ 1 ರಿಂದ ಜಾರಿಗೆ ಬರುತ್ತದೆ ಇದರಲ್ಲಿಯೂ ಹುಳುಕನ್ನು ಹುಡುಕುತ್ತಿದ್ದಾರೆ. ಸರಾಸರಿ ವಿದ್ಯುತ್ ವೆಚ್ಚ ಉಳಿತಾಯವಾದರೆ , ಆ ಹಣ ಜನರಿಗೆ ಉಳಿತಾಯವಾಗುತ್ತಿದೆ. ಕುಟೀರ ಜ್ಯೋತಿ, ಭಾಗ್ಯ ಜ್ಯೋತಿ, ಅಮೃತ ಜ್ಯೋತಿ ಯೋಜನೆಗಳಿಗೆ ಎಸ್’ಸಿ, ಎಸ್’ಟಿ ಗಳಿಗೆ 75 ಯೂನಿಟ್ ಬಳಸುತ್ತಾರೆ. ಅದರ ಸರಾಸರಿ ಮೇಲೆ ಶೇ.10 ಸೇರಿಸಿ, ವಿದ್ಯುತ್ ಉಚಿತವಾಗುತ್ತದೆ ಎಂದು ವಿವರಿಸಿದರು.
Also read: ಸರ್ವಜನಾಂಗದ ಶಾಂತಿಯ ತೋಟ ಸೃಷ್ಟಿಸಿ ರಾಜ್ಯ ಕಟ್ಟುತ್ತೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಗೃಹಲಕ್ಷ್ಮಿ: ದೇಶದಲ್ಲೇ ಮಹಿಳಾ ಸಬಲೀಕರಣದ ಪ್ರಪ್ರಥಮ ಯೋಜನೆ
ಈ ಯೋಜನೆಗೆ ವರ್ಷಕ್ಕೆ 30 ಸಾವಿರ ಕೋಟಿ ರೂ. ಖರ್ಚಾಗುತ್ತದೆ. ಆಗಸ್ಟ್ 16 ರಿಂದ ಮನೆಯ ಯಜಮಾನಿ ಖಾತೆಗೆ 2000 ರೂ. ನೀಡಲಾಗುವುದು . ಈ ವರ್ಷದ ಉಳಿದ ಅವಧಿಗೆ 17 ರಿಂದ 18 ಸಾವಿರ ಕೋಟಿ ಮೀಸಲಿಟ್ಟಿದೆ. ಇದರಲ್ಲಿಯೂ ಅತ್ತೆಗೋ, ಸೊಸೆಗೋ ಎಂದು ವ್ಯಂಗ್ಯವಾಡಿದರು. 1 ಕೋಟಿ 30 ಲಕ್ಷ ಕುಟುಂಬಗಳಿಗೆ ಲಾಭವಾಗಲಿದೆ. ಇದು ದೇಶದಲ್ಲಿ ಇಂತಹುದು ಪ್ರಪ್ರಥಮ ಯೋಜನೆಯಾಗಿದೆ ಎಂದರು.
ಗ್ಯಾಸ್ ಬೆಲೆ, ತೊಗರಿಬೇಳೆ, ಪೆಟ್ರೋಲ್, ಡೀಸೆಲ್, ಗೊಬ್ಬರಗಳ ಬೆಲೆ ಏರಿಕೆಯಾಗಿದೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಜೇಬಿಗೆ ದುಡ್ಡು ನೀಡುತ್ತಿರುವುದು ಒಳ್ಳೆಯ ಕಾರ್ಯಕ್ರಮವಲ್ಲವೇ? . ಇದನ್ನೇ ಯೂನಿವರ್ಸಲ್ ಬೇಸಿಕ್ ಇನ್ಕಮ್ ಎನ್ನುವುದು. ಇಷ್ಟರ ಮಟ್ಟಿಗೆ ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಈ ಯೋಜನೆಯ ಹಿಂದಿನ ಸರ್ಕಾರದ ಉದ್ದೇಶವೇನು ಎಂದು ತಿಳಿಯಬೇಕು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post