ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಳೆಗಾಲದ ಸೊಬಗಿನಿಂದ ಕಂಗೊಳಿಸುತ್ತಿರುವ ಮಲೆನಾಡಿನ ಸೌಂದರ್ಯವನ್ನು ಸವಿಯಲು ರಾಜಧಾನಿ ಮಂದಿಗೆ ಕೆಎಸ್’ಆರ್’ಟಿಸಿ ವಿಶೇಷ ಅವಕಾಶವನ್ನು ಕಲ್ಪಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಬೆಂಗಳೂರು-ಜೋಗ ಜಲಪಾತ Jog falls ಸೇರಿದಂತೆ ಶಿವಮೊಗ್ಗ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ವಾರಾಂತ್ಯದ ವಿಶೇಷ ಪ್ಯಾಕೇಜ್ ಟೂರ್ ಜಾರಿಗೆ ತಂದಿದ್ದು, ಜುಲೈ 22ರಿಂದ ಇದು ಆರಂಭವಾಗಲಿದೆ. ನಾನ್ ಎಸಿ ಸ್ಲೀಪರ್ ಬಸ್’ನಲ್ಲಿ, ವಾರಾಂತ್ಯದ ಶುಕ್ರವಾರ ಹಾಗೂ ಶನಿವಾರ ಈ ವಿಶೇಷ ಪ್ಯಾಕೇಜ್ ಇರಲಿದೆ.
ಪ್ಯಾಕೇಜ್ ಟೂರ್ ವೇಳಾಪಟ್ಟಿ ವಿವರ:
ಬೆಂಗಳೂರಿನಿಂದ ಸಾಗರ: 10.30-5.30
ಹೊಟೇಲ್’ನಲ್ಲಿ ಫ್ರೆಶ್ ಅಪ್ ಹಾಗೂ ವಿಶ್ರಾಂತಿ: 5.30-7.00
ಉಪಹಾರ: 7.00-7.15
ಸಾಗರದಿಂದ ವರದಹಳ್ಳಿ: 7.15-7.30
ವರದಹಳ್ಳಿಯಿಂದ ವರದಮೂಲ: 8.30-9.00
ವರದಮೂಲದಿಂದ ಇಕ್ಕೇರಿ: 9.15-9.30
ಇಕ್ಕೇರಿಯಿಂದ ಕೆಳದಿ: 10.30-11.00
ಕೆಳದಿಯಿಂದ ಸಾಗರ: 12.00-12.30
ಮಧ್ಯಾಹ್ನದ ಊಟ: 12.45-01.15
ಸಾಗರದಿಂದ ಜೋಗ: 13.30-14.15
ಜೋಗದಿಂದ ಸಾಗರ: 18.15-19.00
ಶಾಪಿಂಗ್ ಸಮಯ: 19.00-20.00
ರಾತ್ರಿ ಊಟ: 20.30-20.45
ಸಾಗರದಿಂದ ಬೆಂಗಳೂರು: 20.00-5.00
Also read: ಭದ್ರಾವತಿ: ಮಣಿಪಾಲ ಆರೋಗ್ಯಕಾರ್ಡ್ 2022ರ ನೋಂದಾವಣಿ ಪ್ರಕ್ರಿಯೆಗೆ ಚಾಲನೆ
ಪ್ಯಾಕೇಜ್ ದರಗಳು ಹೀಗಿವೆ:
ವಯಸ್ಕರಿಗೆ ರೂ.2300
ಮಕ್ಕಳಿಗೆ(6ರಿಂದ 12): ರೂ. 2100
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post