ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರಧಾನಿ ನರೇಂದ್ರ ಮೋದಿ #PM Narendra Modi ಅವರು ಡಿಜಿಟಲ್ ಇಂಡಿಯಾ ಘೋಷಣೆ ಮಾಡಿದ ನಂತರ ಈ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಯಾಗಿದ್ದು, ಇದರ ಸಕಾರಾತ್ಮಕ ಬಳಕೆ ಹೆಚ್ಚಾಗಲಿ ಎಂದು ಕಿದ್ವಾಯಿ ಆಸ್ಪತ್ರೆಯ ಹಿರಿಯ ವೈದ್ಯೆ ಹಾಗೂ ಕೊಟ್ಟಾಯಂ ಐಐಐಟಿಯ ಆಡಳಿತ ಮಂಡಳಿ ಅಧ್ಯಕ್ಷೆ ಡಾ.ವಿಜಯಲಕ್ಷ್ಮೀ ದೇಶಮಾನೆ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ಅಸೋಸಿಯೇಶನ್ ವತಿಯಿಂದ ಆಯೋಜಿಸಲಾಗಿದ್ದ ಸಾಧಕರಿಗೆ ಸುವರ್ಣ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ 2024ರ ಪ್ರದಾನ ಹಾಗೂ ಡಿಜಿಟಲ್ ಮಾರ್ಕೆಟಿಂಗ್ ಕುರಿತಾಗಿನ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭೂಮಿ ಮೇಲಿನ ಮೊದಲ ಮನೋವಿಜ್ಞಾನ ಪುಸ್ತಕ ಎಂದರೆ ಅದು ಭಗವದ್ಗೀತೆ. ಪ್ರತಿಯೊಬ್ಬರ ಎಲ್ಲ ರೀತಿಯ ಸಮಸ್ಯೆಗಳಿಗೆ ಗೀತೆಯಲ್ಲಿಯೇ ಉತ್ತರವಿದೆ. ಗೀತೆಯ ಅಧ್ಯಯನ ಮಾಡುವುದರಿಂದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.
Also read: ಕನ್ನಡದ ಬಳಕೆಯಿಂದ ಮಾತ್ರ ಅಸ್ಮಿತೆ ಉಳಿವು ಸಾಧ್ಯ: ವಾಗ್ಮಿ ಡಾ.ಕೆ.ಪಿ. ಪುತ್ತೂರಾಯ ಅಭಿಮತ
ಹಿರಿಯ ಪತ್ರಕರ್ತೆ ಆಶಾ ಕೃಷ್ಣಸ್ವಾಮಿ ಮಾತನಾಡಿ, ತಂತ್ರಜ್ಞಾನ ಮುಂದುವರೆದು ಡಿಜಿಟಲ್ ಮಾಧ್ಯಮ ಬಂದಿದ್ದರೂ ಸಾಂಪ್ರದಾಯಿಕ ಮಾಧ್ಯಮಕ್ಕೆ ಅದರದ್ದೇ ಆದ ಓದುಗರ ವರ್ಗವಿದೆ. ಆದರೂ ತಂತ್ರಜ್ಞಾನದಿAದ ನಾವು ದೂರವಿರಲು ಸಾಧ್ಯವಿಲ್ಲ. ಪತ್ರಕರ್ತರಿಗೆ ಸಮಾಜದಲ್ಲಿ ಒಂದು ಗೌರವ ಹಾಗೂ ಘನತೆಯಿದೆ. ಯಾವುದೇ ಪತ್ರಕರ್ತರು ಇದು ಕಡಿಮೆಯಾಗದಂತೆ ನಡೆದುಕೊಳ್ಳಬೇಕು ಎಂದರು.
ಡಿಜಿಟಲ್ ಮಾಧ್ಯಮದ ಪತ್ರಕರ್ತರು ಕಂಟೆಂಟ್ ಕ್ರಿಯೇಟರ್ ಆಗುತ್ತಿದ್ದಾರೆ. ಆದರೆ, ನಿಜವಾದ ಪತ್ರಿಕೋಧ್ಯಮ ಇದಲ್ಲ. ಕಂಟೆAಟ್ ಕ್ರಿಯೇಟ್ ಬದಲಾಗಿ ಸಾಂಪ್ರದಾಯಿಕ ಸುದ್ದಿ ವಿಶ್ಲೇಷಣೆ ಮಾಡುವ ಪತ್ರಕರ್ತರಾಗಬೇಕು ಎಂದು ಕರೆ ನೀಡಿದರು.
ಪತ್ರಕರ್ತ, ದ ಫೈಲ್ ಡಿಜಿಟಲ್ ಮಾಧ್ಯಮದ ಮುಖ್ಯಸ್ಥ ಮಹಾಂತೇಶ್ ಭದ್ರಾವತಿ ಮಾತನಾಡಿ, ಇಂದಿನ ದಿನಗಳಲ್ಲಿ ಗಾಸಿಪ್ ಸುದ್ದಿಗಳೇ ಹೆಚ್ಚಾಗಿದ್ದು, ಮನಸ್ಸಿಗೆ ಬಂದ ಹಾಗೆ ಸುದ್ದಿ ಮಾಡುವುದೇ ಪತ್ರಕರ್ತರ ಕೆಲಸ ಎಂದುಕೊAಡವರು ಹಲವರಿದ್ದಾರೆ. ಇದರಿಂದ ಕ್ಷೇತ್ರದ ಘನತೆಗೆ ಧಕ್ಕೆಯಾಗುತ್ತದೆ ಎಂದರು.

ಗಂಭೀರವಾಗಿ ಪರಿಗಣಿಸಿರುವ ಡಿಜಿಟಲ್ ಮಾಧ್ಯಮದ ಪತ್ರಕರ್ತರಲ್ಲಿ ಸಂಘಟನೆ ಹೆಚ್ಚಾಗಬೇಕು. ಡಿಜಿಟಲ್ ಕಾನೂನು, ಕಾಪಿರೈಟ್ ಹಾಗೂ ಆರ್ಥಿಕವಾಗಿಯೂ ಸಹ ಸಹಾಯ ಆಗುವಂತೆ ಸಂಘಟನೆ ಬಲವಾಗಬೇಕು ಎಂದು ಸಲಹೆ ನೀಡಿದರು.
ವಿಕಾಸ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ್ ಜೋಶಿ ಮಾತನಾಡಿ, ಡಿಜಿಟಲ್ ಮೀಡಿಯಾ ಅಸೋಸಿಯೇಶನ್ ಹಾಗೂ ವಿಕಾಸ ಸಂಸ್ಥೆಯ ಹಿನ್ನೆಲೆ, ಪಯಣದ ಕುರಿತಾಗಿ ತಿಳಿಸಿ, ಎಲೆಮರೆಯ ಕಾಯಿಯಂತೆ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಸಾಧಕರನ್ನು ಗುರುತಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮುಂಬೈ ಐಐಟಿ ಹಾಗೂ ಡಿಜಿಟಲ್ ಮಾರ್ಕೆಟಿಂಗ್ ಇಂಜಿನಿಯರ್ ಚೈತನ್ಯ ಬೇಲೆ ಮಾತನಾಡಿ, ಡಿಜಿಟಲ್ ಮಾರ್ಕೆಟಿಂಗ್ ತಂತ್ರಜ್ಞಾನದ ಕುರಿತಾಗಿ ಮಾಹಿತಿ ತಿಳಿಸಿಕೊಟ್ಟರು.

ನೋಬ್ಲಿ ಕ್ರೀಂ ಸಾಫ್ಟ್ ವೇರ್ ಮುಖ್ಯಸ್ಥ ಹಾಗೂ ಹಿರಿಯ ಪತ್ರಕರ್ತ ಪ್ರಶಾಂತ್ ಹೆಬ್ಬಾರ್ ಮಾತನಾಡಿ, 2020ರಲ್ಲಿ ನೋಬ್ಲಿ ಕ್ರೀಂ ಸಾಫ್ಟ್ ವೇರ್ ಆರಂಭಿಸಿದ್ದು, ವರ್ಲ್ಡ್ ಪ್ರೆಸ್’ಗೆ ಪರ್ಯಾಯವಾಗಿ ನಮ್ಮ ಸಾಫ್ಟ್ ವೇರ್ ಬಳಸಬಹುದಾಗಿದೆ. ಇದು ಸ್ವದೇಶಿ ಆ್ಯಪ್ ಆಗಿದ್ದು, ಇದರಲ್ಲಿ 10ರಿಂದ 1 ಲಕ್ಷ ಜನರವರೆಗೂ ನ್ಯೂಸ್ ಲೆಟರ್ ಕಳುಹಿಸಬಹುದಾಗಿದೆ ಎಂದರು.
ನೋಬ್ಲಿ ಕ್ರೀಂ ಸಾಫ್ಟ್ ವೇರ್ ಡೌನ್ ಲೋಡ್ ಮಾಡಿಕೊಂಡು, ಸೈನ್ ಅಪ್ ಮಾಡಿಕೊಳ್ಳುವ ಮೂಲಕ ಬಳಸಬಹುದಾಗಿದೆ. ಕ್ರಿಯೇಟರ್ ಟೂಲ್ ಹಾಗೂ ಎಐ ಮೂಲಕ ಕಂಟೆಂಟ್ ಕ್ರಿಯೇಟ್ ಮಾಡಬಹುದಾಗಿದ್ದು, ಎಷ್ಟು ಮಂದಿ ನೋಡಿದ್ದಾರೆ ಎಂಬುದನ್ನು ತಿಳಿಯಬಹುದಾಗಿದೆ. ಅಲ್ಲದೇ ಇದರ ಮೂಲಕ ಹಣವನ್ನೂ ಸಹ ಗಳಿಸಬಹುದಾಗಿದೆ ಎಂದರು.
ತನಿಖಾ ಪತ್ರಕರ್ತ, ದ ಫೈಲ್ ಡಿಜಿಟಲ್ ಮಾಧ್ಯಮದ ಮುಖ್ಯಸ್ಥರಾದ ಮಹಂತೇಶ್ ಭದ್ರಾವತಿ, ಫ್ರೀಡಂ ಟಿವಿ ಡಿಜಿಟಲ್ ಮಾಧ್ಯಮ ಮುಖ್ಯಸ್ಥ ನಾಗರಾಜ್, ಸಮಾಜ ಸೇವಾ ಕ್ಷೇತ್ರದ ಜ್ಯೋತಿ ಗೌಡ, ಶಾಂತಕುಮಾರ್, ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಬಿ.ಎಂ. ಶಿವರುದ್ರಯ್ಯ ಸೇರಿದಂತೆ ಐವರಿಗೆ ಸುವರ್ಣ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಅಸೋಸಿಯೇಶನ್ ಅಧ್ಯಕ್ಷ ಹನುಮೇಶ್ ಕೆ. ಯಾವಗಲ್, ವಿವಿಧ ಡಿಜಿಟಲ್ ಮಾಧ್ಯಮಗಳ ಸಂಪಾದಕರು, ಪತ್ರಕರ್ತರುಗಳು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post