No Result
View All Result
Mysuru Ninada Griha Sangeet Concert On August 16th
English Articles

Mysuru to Host Hindustani Classical Vocal Concert on August 16

by kalpa News
August 11, 2026
0

Kalpa Media House  |  MYSURU | A Hindustani classical vocal concert by renowned Gwalior gharana musician Pandit M.P. Hegde of...

Read moreDetails
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
  • Advertise With Us
  • Grievances
  • About Us
  • Contact Us
Thursday, August 13, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ಅಹಿಂದ ಎಲ್ಲಾ ನನ್ನ ಹಿಂದೆ ಎನ್ನುವ ಸಿದ್ದರಾಮಯ್ಯ ಅವರ ಮನಃಸ್ಥಿತಿಯನ್ನು ದಲಿತರು ಅರ್ಥ ಮಾಡಿಕೊಳ್ಳಲಿ: ಹೆಚ್‌ಡಿಕೆ

kalpa News by kalpa News
January 1, 2024
in ಬೆಂಗಳೂರು ನಗರ
0
ಅಹಿಂದ ಎಲ್ಲಾ ನನ್ನ ಹಿಂದೆ ಎನ್ನುವ ಸಿದ್ದರಾಮಯ್ಯ ಅವರ ಮನಃಸ್ಥಿತಿಯನ್ನು ದಲಿತರು ಅರ್ಥ ಮಾಡಿಕೊಳ್ಳಲಿ: ಹೆಚ್‌ಡಿಕೆ

File Image

Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   | ಬೆಂಗಳೂರು |

ಮೈತ್ರಿಕೂಟದ ಪಕ್ಷಗಳು ಮಲ್ಲಿಕಾರ್ಜುನ ಖರ್ಗೆ ಅವರೇ ಪ್ರಧಾನಿ ಅಭ್ಯರ್ಥಿ ಆಗಲಿ ಎಂದು ಹೇಳುತ್ತಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ CMSiddaramaiah ಮಾತ್ರ ರಾಹುಲ್ ಗಾಂಧಿ Rahul Gandhi ಪ್ರಧಾನಿಯಾಗಲಿ ಎಂದು ಹೇಳುತ್ತಿದ್ದಾರೆ. ಇದನ್ನು ರಾಜ್ಯದ ದಲಿತರು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ HDKumaraswamy ಅವರು ಹೇಳಿದರು.

ಬೆಂಗಳೂರಿನ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, MamathaBanarji ದೆಹಲಿ ಸಿಎಂ ಅರವಿಂದ ಕೇಜ್ರೀವಾಲ್ ArvindKejriwal ಸೇರಿದಂತೆ ಮೈತ್ರಿಕೂಟದ 16 ಪಕ್ಷಗಳ ನಾಯಕರು ಖರ್ಗೆ ಪ್ರಧಾನಿ ಅಭ್ಯರ್ಥಿ ಆಗಲಿ ಎನ್ನುತ್ತಿದ್ದಾರೆ. ಆದರೆ, ಸಿದ್ದರಾಮಣ್ಣ ಮಾತ್ರ ರಾಹುಲ್ ಗಾಂಧಿ ಪಿಎಂ ಆಗಬೇಕು ಅಂತಾರೆ. ಅಂದರೆ, ರಾಹುಲ್ ಗಾಂದಿ ಋಣ ತೀರಿಸಬೇಕು ಅವರು. ಅದಕ್ಕೆ ಹೀಗೆ ಹೇಳುತ್ತಿದ್ದಾರೆ ಟಾಂಗ್ ನೀಡಿದರು.
ಖರ್ಗೆ MallikarjunaKarge ಅವರು ಪ್ರಧಾನಿ ಆಗುತ್ತಾರೋ ಬಿಡುತ್ತಾರೋ ಬೇರೆ ಮಾತು. ಅನ್ಯ ರಾಜ್ಯಗಳ ಪಕ್ಷಗಳ ನಾಯಕರು ಖರ್ಗೆ ಪ್ರಧಾನಿ ಅಭ್ಯರ್ಥಿ ಆಗಲಿ ಎಂದು ಹೇಳಿದರೆ, ಇವರು ಕೊನೆಪಕ್ಷ ಸುಮ್ಮನಿರಬಹುದಿತ್ತು. ದಲಿತ ಎನ್ನುವುದರ ಬದಲು ಒಬ್ಬ ಕನ್ನಡಿಗ ಪ್ರಧಾನಮಂತ್ರಿ ಅಭ್ಯರ್ಥಿ ಆಗಲಿ ಎಂದು ಹೇಳುವ ಹೃದಯ ವೈಶಾಲ್ಯತೆ ಮೆರೆಯಬೇಕಿತ್ತು. ಅದನ್ನು ಬಿಟ್ಟು ಸಿದ್ದರಾಮಯ್ಯ ರಾಹುಲ್ ಗಾಂದಿ ಆಗಬೇಕು ಅಂತಾರೆ. ಇದನ್ನು ದಲಿತ ಸಮಾಜವೇ ತೀರ್ಮಾನ ಮಾಡಲಿ. ನಾನು ಮಾತ್ರ ಮುಂದೆ, ಅಹಿಂದ ಎಲ್ಲಾ ನನ್ನ ಹಿಂದೆ ಎನ್ನುವ ಅವರ ಮನಃಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲಿ ಎಂದು ಅವರು ಹೇಳಿದರು.

Also read: ಶ್ರೀ ವ್ಯಾಸತೀರ್ಥವಿದ್ಯಾಪೀಠದ 8ನೇ ವಾರ್ಷಿಕೋತ್ಸವ

ಖರ್ಗೆ ಅವರ ತ್ಯಾಗದಿಂದ ಸಿದ್ದರಾಮಯ್ಯ ಅವರು ಈ ಸ್ಥಾನದಲ್ಲಿ ಇದ್ದಾರೆ. ಹಿಂದೆ ಅವರನ್ನು ಪ್ರತಿಪಕ್ಷ ಸ್ಥಾನದಿಂದ ಒಕ್ಕಲೆಬ್ಬಿಸಿದ್ದವರು ಕೂಡ ಇವರೇ. ಪರಮೇಶ್ವರ ಅವರು ಸಿಎಂ ಆಗದಂತೆ ತಡೆದವರು ಕೂಡ ಇವರೇ. ಆದರೂ ತಾವು ದಲಿತೋದ್ಧಾರಕ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಇದನ್ನು ಆ ಸಮುದಾಯದ ಜನರು ನಂಬುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.
ಆದರೆ; ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಲಿದೆ. ಈ ಮೈತ್ರಿಕೂಟ ಎಲ್ಲಾ ಕ್ಷೇತ್ರಗಳಲ್ಲಿ ಗೆದ್ದು ಪ್ರಧಾನಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಸ್ಥಾನದಲ್ಲಿ ನೋಡಲಿದೆ ಎಂದು ಅವರು ತಿಳಿಸಿದರು.

ವರದಿ: ಡಿ.ಎಲ್. ಹರೀಶ್, ಬೆಂಗಳೂರು
Kalahamsa Infotech private limited
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: ArvindKejriwalBangaloreCMSiddaramaiahKannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaMallikarjunaKargeMamathaBanarjiNewsinKannadaNewsKannadaRahul Gandhiಅರವಿಂದ ಕೇಜ್ರೀವಾಲ್ಖರ್ಗೆಬೆಂಗಳೂರುಮಮತಾ ಬ್ಯಾನರ್ಜಿಮುಖ್ಯಮಂತ್ರಿ ಸಿದ್ದರಾಮಯ್ಯರಾಹುಲ್ ಗಾಂಧಿ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಶ್ರೀ ವ್ಯಾಸತೀರ್ಥವಿದ್ಯಾಪೀಠದ 8ನೇ ವಾರ್ಷಿಕೋತ್ಸವ

Next Post

ರೈತರ ಬದುಕನ್ನು ಉನ್ನತೀಕರಿಸಲು ನಾವು ಬದ್ದ: ಸಿಎಂ ಸಿದ್ದರಾಮಯ್ಯ ಭರವಸೆ

kalpa News

kalpa News

Next Post
ರಾಜ್ಯದ ಜನರಿಗೆ ಮೋಸ ಮಾಡುವ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ರೈತರ ಬದುಕನ್ನು ಉನ್ನತೀಕರಿಸಲು ನಾವು ಬದ್ದ: ಸಿಎಂ ಸಿದ್ದರಾಮಯ್ಯ ಭರವಸೆ

Leave a Reply Cancel reply

Your email address will not be published. Required fields are marked *

No Result
View All Result
Mysuru Ninada Griha Sangeet Concert On August 16th
English Articles

Mysuru to Host Hindustani Classical Vocal Concert on August 16

by kalpa News
August 11, 2026
0

Kalpa Media House  |  MYSURU | A Hindustani classical vocal concert by renowned Gwalior gharana musician Pandit M.P. Hegde of...

Read moreDetails
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL