ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
2024ನೆಯ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
ಈ ಕುರಿತಂತೆ ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆ 2024ರ ಸಾರ್ವತ್ರಿಕ ರಜಾ ದಿನಾಂಕಗಳನ್ನು ಘೋಷಣೆ ಮಾಡಿದ್ದು, ಇದರಂತೆ 2ನೆಯ ಹಾಗೂ 4ನೆಯ ಶನಿವಾರ ಹಾಗೂ ಭಾನುವಾರದ ರಜಾ ದಿನಗಳನ್ನು ಹೊರತುಪಡಿಸಿ 2024 ರಲ್ಲಿ 21 ಸಾರ್ವತ್ರಿಕ ರಜಾ ದಿನಗಳು ಇರಲಿವೆ.
ಅಧಿಕೃತ ರಜಾ ಪಟ್ಟಿಯ ಅನ್ವಯ ಅಕ್ಟೋಬರ್ ತಿಂಗಳಲ್ಲಿ ಹೆಚ್ಚಿನ ಸಾರ್ವಜನಿಕ ರಜಾದಿನಗಳು ಲಭ್ಯವಿದ್ದು, ಫೆಬ್ರವರಿ ತಿಂಗಳಲ್ಲಿ ಯಾವುದೇ ವಿಶೇಷ ದಿನಗಳು ಮತ್ತು ಹಬ್ಬ ಹರಿದಿನಗಳು ಇಲ್ಲದ್ದರಿಂದ ಒಂದು ದಿನವೂ ಸರ್ಕಾರಿ ರಜೆ ಇಲ್ಲ.
2024ರ ಎಪ್ರಿಲ್ 14ರಂದು ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ 2024ರ ಎಪ್ರಿಲ್ 21ರಂದು ಮಹಾವೀರ ಜಯಂತಿಗಳು ಭಾನುವಾರ ಮತ್ತು 2024ರ ಅಕ್ಟೋಬರ್ 12ರ 2ನೆಯ ಶನಿವಾರ ವಿಜಯದಶಮಿ ಬರುವುದರಿಂದ ಇವುಗಳನ್ನು ರಜಾ ಪಟ್ಟಿಯಲ್ಲಿ ನಮೂದಿಸಿಲ್ಲ.
ಅಲ್ಲದೇ, ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನರ ಹಬ್ಬಗಳು ನಿಗದಿತ ದಿನಾಂಕದAದು ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು ಎಂದು ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.
Also read: ಟೆಂಪೋ-ಕಾರು ಅಪಘಾತ: ಓರ್ವನಿಗೆ ಗಂಭೀರ ಗಾಯ
ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯದಾದ್ಯಂತ ಸರ್ಕಾರಿ ಕಚೇರಿಗಳು ಮುಚ್ಚಲ್ಪಡುತ್ತವೆ. ಕಚೇರಿಯ ಜರೂರು ಕೆಲಸವನ್ನು ವಿಲೇವಾರಿ ಮಾಡುವ ಬಗ್ಗೆ ಇಲಾಖಾ ಮುಖ್ಯಸ್ಥರುಗಳು ಸೂಕ್ತ ವ್ಯವಸ್ಥೆ ಮಾಡತಕ್ಕದ್ದು ಎಂದು ಸರ್ಕಾರ ತಿಳಿಸಿದೆ.
2024 ಸಾರ್ವತ್ರಿಕ ರಜೆಗಳ ಪಟ್ಟಿ
ಜನವರಿ 15: ಸಂಕ್ರಾಂತಿ ಹಬ್ಬ
ಜನವರಿ 26: ಗಣರಾಜ್ಯೋತ್ಸವ
ಮಾರ್ಚ್ 8: ಮಹಾಶಿವರಾತ್ರಿ
ಮಾರ್ಚ್ 29: ಗುಡ್ ಫ್ರೈಡೆ
ಎಪ್ರಿಲ್ 9: ಯುಗಾದಿ ಹಬ್ಬ
ಎಪ್ರಿಲ್ 11: ರಂಜಾನ್
ಮೇ 1: ಕಾರ್ಮಿರ ದಿನಾಚರಣೆ
ಮೇ 10: ಬಸವಜಯಂತಿ/ ಅಕ್ಷಯ ತೃತೀಯ
ಜೂನ್ 17: ಬಕ್ರೀದ್
ಜುಲೈ 17: ಮೊಹರಂ ಕಡೇ ದಿನ
ಆಗಸ್ಟ್ 15: ಸ್ವಾತಂತ್ರ ದಿನಾಚರಣೆ
ಸೆಪ್ಟೆಂಬರ್ 7: ಗಣೇಶ ಚತುರ್ಥಿ
ಸೆಪ್ಟೆಂಬರ್ 16: ಈದ್ ಮಿಲಾದ್
ಅಕ್ಟೋಬರ್ 2: ಗಾಂಧಿ ಜಯಂತಿ
ಅಕ್ಟೋಬರ್ 11: ಮಹಾನವಮಿ/ಆಯುಧ ಪೂಜೆ
ಅಕ್ಟೋಬರ್ 17: ಮಹರ್ಷಿ ವಾಲ್ಮೀಕಿ ಜಯಂತಿ
ಅಕ್ಟೋಬರ್ 31: ನರಕ ಚತುರ್ದಶಿ
ನವೆಂಬರ್ 1: ಕನ್ನಡ ರಾಜ್ಯೋತ್ಸವ
ನವೆಂಬರ್ 2: ಬಲಿಪಾಡ್ಯಮಿ
ನವೆಂಬರ್ 18: ಕನಕದಾಸ ಜಯಂತಿ
ಡಿಸೆಂಬರ್ 25: ಕ್ರಿಸ್ಮಸ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post