ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ಲಾಸ್ಟಿಕ್ ತಾಜ್ಯಗಳ ಮರುಬಳಕೆಯನ್ನು ಐಟಿಸಿ ಸಂಸ್ಥೆಯ ಸನ್‌ಫೀಸ್ಟ್ ಹಿಪ್ಪಿ ನೂಡಲ್ಸ್ ಹಾಗೂ ವೇ ಫಾರ್ ಲೈಫ್ ಎನ್‌ಜಿಓ ಸಹಯೋಗದೊಂದಿಗೆ ವಿಭಿನ್ನ ಪ್ರಯತ್ನ ನಡೆಸಿದ್ದು, ಪ್ಲಾಸ್ಟಿಕ್‌ನಿಂದ ಬೆಂಜ್ ಹಾಗೂ ಡೆಸ್ಕ್ ಗಳನ್ನು ತಯಾರಿಸಿ, ಸರ್ಕಾರಿ ಶಾಲೆಗಳಿಗೆ ದಾನವಾಗಿ ನೀಡಿದೆ.
ಕ್ರೀಡಾ ಇಲಾಖೆ ಅಪರಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಯೌವನಿಕಾ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್‌ನಿಂದ ತಯಾರಿಸಿದ ಸಾವಿರಕ್ಕೂ ಹೆಚ್ಚು ಬೆಂಚ್ ಹಾಗೂ ಡೆಸ್ಕ್‌ಗಳನ್ನು ಜಕ್ಕೂರು ಸರ್ಕಾರಿ ಶಾಲೆಗೆ ವಿತರಿಸಿದರು.
ಈ ಕುರಿತು ಮಾತನಾಡಿದ ಐಟಿಸಿ ಮುಖ್ಯ ಕಾರ್ಯನಿರ್ವಾಹಕಾ ಅಧಿಕಾರಿ ಕವಿತಾ ಚತುರ್ವೇದಿ, ಐಟಿಸಿ ಸಂಸ್ಥೆಯ ಸನ್‌ಫೀಸ್ಟ್ ಹಿಪ್ಪಿ ಹಾಗೂ ವೇ ಫಾರ್ ಲೈಫ್ ಎನ್‌ಜಿಓ ಜೊತೆಗೂಡಿ “ವರ್ಲ್ಡ್- ಥ್ರಾಶ್ ಟು ಟ್ರೆಶರ್” ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದರ ಭಾಗವಾಗಿ 1 ಸಾವಿರ ಬೆಂಜ್, ಡೆಸ್ಕ್‌ಗಳನ್ನು ನಿರ್ಮಿಸಲಾಗಿದೆ. ಇದಕ್ಕಾಗಿ 18 ಸಾವಿರ ಕಿಲೋ ಪ್ಲಾಸ್ಟಿಕ್‌ನನ್ನು ಬಳಕೆ ಮಾಡಲಾಗಿದೆ ಎಂದರು.
Also read: ಭ್ರಷ್ಟ ವ್ಯವಸ್ಥೆಯನ್ನು ಮಟ್ಟ ಹಾಕಲು ಲೋಕಾಯುಕ್ತ ಅಧಿಕಾರಿಗಳಿಗೆ ಸೂಚನೆ: ಬಿ.ಎಸ್. ಪಾಟೀಲ್
ಪ್ಲಾಸ್ಟಿಕ್ ಬಳಕೆ ನಿಲ್ಲಿಸುವಂತೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ, ಈಗಾಗಲೇ ಬಳಕೆ ಮಾಡಿರುವ ಪ್ಲಾಸ್ಟಿಕ್ ಪರಿಸರವನ್ನು ಹಾಳು ಮಾಡುವ ಸಾಧ್ಯತೆ ಇದೆ. ಹೀಗಾಗಿ ಈ ಪ್ಲಾಸ್ಟಿಕ್‌ನನ್ನು ಮರುಬಳಕೆ ಮಾಡುವ ಥ್ರಾಶ್ ಟು ಟ್ರೆಶರ್ ಕಾರ್ಯಕ್ರಮವನ್ನು ವಿಶ್ವಾದ್ಯಂತ ಹಮ್ಮಿಕೊಂಡಿದ್ದೇವೆ. ಪ್ರಸ್ತುತ ಬೆಂಗಳೂರಿನಲ್ಲಿ ಈ ಪ್ಲಾಸ್ಟಿಕ್ ರೀಸೈಕಲ್ ಮಾಡಿ ತಯಾರಿಸಿದ ಬೆಂಚ್ ಹಾಗೂ ಡೆಸ್ಕ್‌ಗಳನ್ನು ಜಕ್ಕೂರಿನ ಸರ್ಕಾರಿ ಶಾಲೆಗೆ ನೀಡಲಾಗಿದೆ. ಇನ್ನಷ್ಟು ಡೆಸ್ಕ್ ತಯಾರಿಸುವ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ ಮಾರ್ಚ್ ಒಳಗಾಗಿ ಶಾಲೆಗಳಿಗೆ ನೀಡಲಿದ್ದೇವೆ ಎಂದರು.
ಮಕ್ಕಳಿಗೂ ತರಬೇತಿ:
ಪ್ಲಾಸ್ಟಿಕ್ ತ್ಯಾಜ್ಯಗಳ ಮರುಬಳಕೆ ಕುರಿತು ಮಕ್ಕಳಿಗೂ ತರಬೇತಿ ನೀಡಲು ಎಲ್ಲಾ ಶಾಲೆಗಳೊಂದಿಗೆ ಈ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿಶ್ವಾದ್ಯಂತ ಸುಮಾರು 100 ನಗರಗಳಲ್ಲಿ 3.5 ಮಿಲಿಯನ್ ಶಾಲಾ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಮರುಬಳಕೆಯ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post