ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮನೆ ಮುಂದೆ ತನ್ನ ಪಾಡಿಗೆ ತಾನು ಆಟವಾಡಿಕೊಂಡಿದ್ದ ಬಾಲಕನಿಗೆ ವ್ಯಕ್ತಿಯೊಬ್ಬ ಅನಾವಶ್ಯಕವಾಗಿ ಕಾಲಿನಿಂದ ಜಾಡಿಸಿ ಒದ್ದು #Man kicks boy ಬೀಳಿಸಿದ ಘಟನೆ ತ್ಯಾಗರಾಜನಗರದಲ್ಲಿ ನಡೆದಿದೆ.
ನೀವ್ ಜೈನ್ ಎಂಬ ಬಾಲಕ ತನ್ನ ಅಜ್ಜಿ ಮನೆಗೆ ಬಂದಿದ್ದನು. ಮನೆಯ ಮುಂದೆ ದೊಡ್ಡವರು ಆಟವಾಡುತ್ತಿದ್ದರು. ಈ ವೇಳೆ ಅವರ ಜೊತೆಯಲ್ಲಿ ಬಾಲಕನೂ ಸಹ ತನ್ನ ಪಾಡಿಗೆ ಆಟವಾಡುತ್ತಾ ನಿಂತಿದ್ದನು.
ಈ ವೇಳೆ ಅಲ್ಲಿಗೆ ಹಿಂದಿನಿಂದ ಬಂದ ರಂಜನ್ ಎಂಬ ವ್ಯಕ್ತಿ ಬಾಲಕನ ಬೆನ್ನಿಗೆ ಕಾಲಿನಿಂದ ಫುಟ್ಬಾಲ್ ಒದೆಯುವ ರೀತಿಯಲ್ಲಿ ಜಾಡಿಸಿ ಒದ್ದಿದ್ದಾನೆ. ಒದ್ದ ಕಾರಣ ಬಾಲಕ ಮುಂದಕ್ಕೆ ಬಿದ್ದಿದ್ದು, ಆತನಿಗೆ ಹಲವು ತರಚಿದ ಗಾಯಗಳಾಗಿವೆ.
ಬಾಲಕನಿಗೆ ರಂಜನ್ ಎಂಬ ವ್ಯಕ್ತಿ ಕಾಲಿನಿಂದ ಒದೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರಯಾಗಿದೆ. ಬಾಲಕನ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಇದರ ಆಧಾರದಲ್ಲಿ ಆರೋಪಿ ರಂಜನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
ಬನಶಂಕರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















