ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ವಿದ್ಯಾರಣ್ಯಪುರದ ಅಲಸೂರಮ್ಮ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಾರ್ಚ್ 18 ರಿಂದ 21ರ ವರೆಗೆ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಅವುಗಳ ವಿವರಗಳು ಈ ರೀತಿ ಇವೆ :
ಭಜನಾ ಕಾರ್ಯಕ್ರಮ (ಪ್ರತಿದಿನ ಸಂಜೆ 6 ರಿಂದ 7):
ಮಾರ್ಚ್ 18-ವಿದ್ಯಾರಣ್ಯಪುರದ ಶ್ರೀ ವಿಜಯ ವಿಠ್ಠಲ ಭಜನಾ ಮಂಡಳಿ, ಮಾರ್ಚ್ 19-ಜಕ್ಕೂರಿನ ಶ್ರೀ ವಿಜಯ ವಿಠ್ಠಲ ಭಜನಾ ಮಂಡಳಿ, ಮಾರ್ಚ್ 20-ವಿದ್ಯಾರಣ್ಯಪುರದ ಶ್ರೀ ಸುಶಮೀಂದ್ರ ಭಜನಾ ಮಂಡಳಿ.
ಪ್ರವಚನ ಕಾರ್ಯಕ್ರಮ
ಮಾರ್ಚ್ 18 ರಿಂದ 20 (ಪ್ರತಿದಿನ ಸಂಜೆ 7 ರಿಂದ 8). ಪ್ರವಚನಕಾರರು: ಶ್ರೀ ಚಂದ್ರಶೇಖರಾಚಾರ್ಯ, ವಿಷಯ: ಮಹಾಭಾರತದ ಮಹಾನ್ ಸ್ತ್ರೀಯರು
ಹರಿನಾಮ ಸಂಕೀರ್ತನೆ
ಮಾರ್ಚ್ 21, ಶುಕ್ರವಾರ ಸಂಜೆ 6-30ಕ್ಕೆ ಕು. ಪ್ರಣೀತಾ ಮಣ್ಣೂರ್ ಮತ್ತು ಸಂಗಡಿಗರಿAದ ಹರಿನಾಮ ಸಂಕೀರ್ತನೆ. ಕಾರ್ಯಕ್ರಮ ನಡೆಯುವ ಸ್ಥಳ: ಅಲಸೂರಮ್ಮ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಮುಖ್ಯರಸ್ತೆ, ಬಿಇಎಲ್ ಲೇಔಟ್, 3ನೇ ಬ್ಲಾಕ್, ವಿದ್ಯಾರಣ್ಯಪುರ, ಬೆಂಗಳೂರು.
ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಟಿಟಿಡಿ ಎಚ್’ಡಿಪಿಪಿ ಸಂಚಾಲಕರಾದ ಡಾ.ಪಿ. ಭುಜಂಗರಾವ್ ವಿನಂತಿಸಿದ್ದಾರೆ.
Also read: ಶಿವಮೊಗ್ಗ | ರಾಜ್ಯವನ್ನು ಮುಸ್ಮಿಮರಿಗೆ ಮಾರಿಬಿಡಿ | ಕೆ.ಎಸ್. ಈಶ್ವರಪ್ಪ ತೀವ್ರ ಆಕ್ರೋಶ
ಹರಿದಾಸ ಮಂಜರಿ
ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಮಾರ್ಚ್ 20, ಗುರುವಾರ ಸಂಜೆ 5-30ಕ್ಕೆ ಹರಿದಾಸ ಮಂಜರಿ ನಡೆಯಲಿದೆ.
ವೈಷ್ಣವಿ ಕೊಪ್ಪ ಅವರ ಗಾಯನಕ್ಕೆ ಶ್ರೀ ಮಧುಸೂದನ್ ಕೊಪ್ಪ (ತಬಲಾ), ಶ್ರೀ ಭರತ್ (ಹಾರ್ಮೋನಿಯಂ), ಶ್ರೀ ಹನುಮೇಶ್ ಆಚಾರ್ (ಕೊಳಲು), ಶ್ರೀ ವಿನೀತ್ ಜೋಶಿ (ತಾಳ) ಇವರುಗಳು ಸಾಥ್ ನೀಡಲಿz್ದÁರೆ ಎಂದು ನಂದಕಿಶೋರ್ ಆಚಾರ್ ತಿಳಿಸಿದ್ದಾರೆ.
ಸ್ಥಳ: ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 45ನೇ ಅಡ್ಡರಸ್ತೆ, ಜಯನಗರ 5ನೇ ಬಡಾವಣೆ, ಬೆಂಗಳೂರು
ಮಹಾಭಾರತದ ಪ್ರವಚನ ಮಾಲಿಕೆ -8 (ಸಭಾಪರ್ವ)
ಶ್ರೀ ಪೂರ್ಣಪ್ರಜ್ಞ ಪ್ರತಿಷ್ಠಾನದ ವತಿಯಿಂದ ಮಾರ್ಚ್ 18 ರಿಂದ 23ರ ವರೆಗೆ ಪ್ರತಿದಿನ ಸಂಜೆ 6-30ಕ್ಕೆ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯರಿAದ ಮಹಾಭಾರತ ಪ್ರವಚನ ಮಾಲಿಕೆ-8 (ಸಭಾಪರ್ವ) ವಿಷಯವಾಗಿ ಧಾರ್ಮಿಕ ಪ್ರವಚನ ಏರ್ಪಡಿಸಿದೆ. ಸ್ಥಳ: ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ, ಕತ್ರಿಗುಪ್ಪೆ ಮುಖ್ಯರಸ್ತೆ ಬೆಂಗಳೂರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post