ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮೆಡಿಕವರ್ ಆಸ್ಪತ್ರೆ, #Medicover Hospital ಬೆಂಗಳೂರಿನಲ್ಲಿ ಇಂದಿನಿಂದ ಹೊಸದಾಗಿ ಪ್ರಾರಂಭಿಸಲಾದ ಸಂಜೆ ಓಪಿಡಿ ಸೇವೆಗೆ #Evening OPD Service ಹಿರಿಯ ನಟ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಡಾ. ಅನಂತ್ ನಾಗ್ #Padbhushana Puraskrutha Ananthnag ಅವರು ದೀಪ ಬೆಳಗಿ ಅಧಿಕೃತವಾಗಿ ಚಾಲನೆ ನೀಡಿದರು.
ಮೆಡಿಕವರ್ ಆಸ್ಪತ್ರೆಯಲ್ಲಿ ಈಗ ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಸಂಜೆ 5 ರಿಂದ 8 ಗಂಟೆಯವರೆಗೆ ವಿವಿಧ ವಿಭಾಗಗಳ ತಜ್ಞ ವೈದ್ಯರಿಂದ ಒಪಿಡಿ ಸೇವೆ ನೀಡಲಿದ್ದು, ಈ ಸೇವೆಯ ಮುಖ್ಯ ಉದ್ದೇಶವಾಗಿದ್ದು ಉದ್ಯೋಗಸ್ಥರು, ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರು ಹಗಲಿನಲ್ಲಿ ಆಸ್ಪತ್ರೆಗೆ ಬರುವ ಸಮಯವಿಲ್ಲದ ಸಂದರ್ಭದಲ್ಲಿ ಆರೋಗ್ಯ ಸೇವೆ ಪಡೆಯಲು ಅನುಕೂಲವಾಗುತ್ತದೆ.

- ಮಕ್ಕಳ ತಜ್ಞರು (ಪೀಡಿಯಾಟ್ರಿಕ್ಸ್)
- ಜನರಲ್ ಮೆಡಿಸಿನ್ ತಜ್ಞರು
- ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು
- ಮೂಳೆ ಮತ್ತು ಸಂಧ್ಯಸ್ಥಿ ತಜ್ಞರು (ಆರ್ಥೋಪೆಡಿಕ್ಸ್)
- ಶಸ್ತ್ರಚಿಕಿತ್ಸಾ ತಜ್ಞರು (ಜನರಲ್ ಸರ್ಜನ್)

ಡಾ. ಅನಂತ್ ನಾಗ್ ಅವರಿಗೆ ಮೆಡಿಕವರ್ ಆಸ್ಪತ್ರೆಯ ವತಿಯಿಂದ ಪದ್ಮಭೂಷಣ ಪುರಸ್ಕಾರ ಪಡೆದ ಹಿನ್ನೆಲೆಯಲ್ಲಿ ವಿಶೇಷ ಅಭಿನಂದನೆಗಳು ಸಲ್ಲಿಸಲಾಯಿತು. ಅವರು ತಮ್ಮ ಭಾಷಣದಲ್ಲಿ, “ಆರೋಗ್ಯ ಸೇವೆಗಳು ಜನಸಾಮಾನ್ಯರಿಗೆ ಹೆಚ್ಚಿನ ಸಮಯದಲ್ಲಿ ಲಭ್ಯವಿರುವುದು ನಿಜವಾಗಿಯೂ ಶ್ಲಾಘನೀಯ. ಮೆಡಿಕವರ್ ಆಸ್ಪತ್ರೆಯ ಈ ಕಾರ್ಯ ಅತ್ಯಂತ ಉದಾತ್ತ ಮತ್ತು ಜನಪರ.” ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post