ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಒಂದೆಡೆ ಅಕ್ರಮ ಹಣ ದೊರೆತ ಹಿನ್ನೆಲೆಯಲ್ಲಿ ಚನ್ನಗಿರಿ ಶಾಸಕರ ಪುತ್ರ ಮಾಡಾಳ್ ಪ್ರಶಾಂತ್ ಅವರ ಬ್ಯಾಂಕ್ ಖಾತೆಯನ್ನು ಅಧಿಕಾರಿಗಳು ಫ್ರೀಜ್ ಮಾಡಿದ್ದರೆ, ಇನ್ನೊಂದೆಡೆ ಎಂಎಲ್’ಎ ವಿರೂಪಾಕ್ಷಪ್ಪ MLA Virupakshappa ಲೋಕಾಯುಕ್ತ ಕಚೇರಿಯಲ್ಲಿ ಸರೆಂಡರ್ ಆಗುತ್ತಾರೆ ಎಂದು ಹೇಳಲಾಗುತ್ತಿದೆ.
ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಪುತ್ರ ಪ್ರಶಾಂತ್ ಮನೆಯಲ್ಲಿ ಸಿಕ್ಕ 6 ಕೋಟಿ ರೂ. ಹಣದ ಮೂಲದ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ಫೋನ್ ಮೂಲಕ ಲೋಕಾಯುಕ್ತ ಅಧಿಕಾರಿಗಳನ್ನು ಸಂಪರ್ಕ ಮಾಡಿ ಮಾಹಿತಿ ಪಡೆದಿದ್ದಾರೆ. 6 ಕೋಟಿ ರೂ.ಗೆ ಮೂಲ ತೋರಿಸಿರದ ಹಿನ್ನೆಲೆ, ಆದಾಯ ತೆರಿಗೆ ವಂಚಿಸಿರುವ ಬಗ್ಗೆ ಅನುಮಾನಗಳಿವೆ. ಲೋಕಾಯುಕ್ತ ತನಿಖೆಯಲ್ಲಿ ಭ್ರಷ್ಟಾಚಾರದಿಂದ ಹಣ ದುಡಿದಿರುವುದು ಎಂಬುದು ಸಾಬೀತಾದರೆ, ಐಟಿ ಹಾಗೂ ಇಡಿ ತನಿಖೆ ಆರಂಭಿಸಲಿವೆ.
ಇನ್ನು, ಇದರ ನಡುವೆಯೇ ಪ್ರಶಾಂತ್ ಅವರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದ್ದು, ತನಿಖೆ ನಡೆದಿದೆ.
ಇದರ ನಡುವೆಯೇ, ಪ್ರಕರಣದಲ್ಲಿ ಎ1 ಆಗಿರುವ ಮಾಡಾಳ್ ವಿರೂಪಾಕ್ಷಪ್ಪ ಲೋಕಾಯುಕ್ತ ಕಚೇರಿಯಲ್ಲಿ ಶರಣಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
Also read: ಆರ್ಯವೈಶ್ಯ ನಿಗಮಕ್ಕೆ ಹೆಚ್ಚುವರಿ ಅನುದಾನ ಹಿನ್ನೆಲೆ ಡಿ.ಎಸ್. ಅರುಣ್ ಅಭಿನಂದನೆ
ಇವರೇ ಎ1 ಅಗಿರುವ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ದೊರೆಯುವ ಸಾಧ್ಯತೆ ಕಡಿಮೆಯಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಕಚೇರಿಯಲ್ಲೇ ಅವರು ಸರೆಂಡರ್ ಆಗಲಿದ್ದಾರೆ ಎನ್ನಲಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















