ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತನ್ನ ಪತ್ನಿಯನ್ನು ಮನೆಗೆ ಕಳುಹಿಸಿಲ್ಲ ಎಂಬ ಕಾರಣಕ್ಕಾಗಿ ಅತ್ತೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲು ವ್ಯಕ್ತಿಯೊಬ್ಬ ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಬೆಳ್ಳಂದೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ಮನೋಜ್ ಕುಮಾರ್(28) ಎನ್ನುವವನನ್ನು ಪೊಲೀಸರು ಬಂಧಿಸಿದ್ದಾರೆ.
ಇಬ್ಬಲೂರಿನಲ್ಲಿ ಜೂನ್ 8ರಂದು ನಡೆದಿರುವ ಘಟನೆಯಲ್ಲಿ ಗೀತಾ ಗಾಯಗೊಂಡಿದ್ದಾರೆ.
ಆರೋಪಿಯ ಪತ್ನಿ ಕೆಲವು ತಿಂಗಳ ಹಿಂದೆಯಷ್ಟೇ ಪತಿ ಜೊತೆ ಜಗಳ ಮಾಡಿ ತವರು ಮನೆಗೆ ಬಂದಿದ್ದರು. ವಾಪಸು ಹೋಗಲು ನಿರಾಕರಿಸಿದ್ದರು. ಜೂನ್ 8ರಂದು ಇಬ್ಬಲೂರಿನಲ್ಲಿರುವ ತವರು ಮನೆಗೆ ಬಂದಿದ್ದ ಆರೋಪಿ, ಪತ್ನಿಯನ್ನು ಕಳುಹಿಸುವಂತೆ ಒತ್ತಾಯಿಸಿದ್ದ. ಆದರೆ, ಅತ್ತೆ ಗೀತಾ ಒಪ್ಪಿರಲಿಲ್ಲ. ಕೋಪಗೊಂಡ ಮನೋಜ್, ಗೀತಾ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಎಂದು ವರದಿಯಾಗಿದೆ.
Also read: ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕಿತ್ತುಕೊಳ್ಳುತ್ತಿದೆ ಕಾಂಗ್ರೆಸ್ ಸರ್ಕಾರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post