ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮತದಾನಕ್ಕೂ ಮುನ್ನ ಕಾಂಗ್ರೆಸ್ ಪಕ್ಷದಿಂದ ನಮ್ಮ ಕ್ಷೇತ್ರದ ಹಲವು ಕಡೆಗಳಲ್ಲಿ ಮತದಾರರಿಗೆ ಆಮಿಷ ಹಾಗೂ ಒತ್ತಡ ಹಾಕುವ ಕೃತ್ಯಗಳು ನಡೆದಿದ್ದು, ಇದು ಪ್ರಜಾಪ್ರಭುತ್ವಕ್ಕೆ ಮಾರಕ ಮಾತ್ರವಲ್ಲದೇ, ಅಸಹ್ಯಕರವಾದುದು ಎಂದು ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ #C N Manjunath ಆಕ್ರೋಶ ವ್ಯಕ್ತಪಡಿಸಿದರು.
ಮತದಾನದ ನಂತರ ಮಾತನಾಡಿದ ಅವರು, ನಿನ್ನೆ ರಾತ್ರಿ ರಾಮನಗರ, ಸಾತನೂರು, ಮಾಗಡಿ ಸೇರಿದಂತೆ ಹಲವು ಕಡೆಗಳಲ್ಲಿ ಮತದಾರರಿಗೆ ಆಮಿಷ ಒಡ್ಡುವ, ಗ್ಯಾರೆಂಟಿ ಕಾರ್ಡ್ ಹಂಚುವ ಹಾಗೂ ಕ್ಯೂಆರ್ ಕೋಡ್ ಇರುವ ಕೂಪನ್ ನೀಡುವ ಕೃತ್ಯಗಳು ನಡೆದಿವೆ ಎಂದು ಆರೋಪಿಸಿದರು.
ಪ್ರಜಾಪ್ರಭುತ್ವದಲ್ಲಿ ಮತದಾನ ಜನರ ಹಕ್ಕು. ಅದು ಸ್ವತಂತ್ರವಾಗಿರಬೇಕು. ಬದಲಾಗಿ ಅವರ ಮೇಲೆ ಒತ್ತಡ ಹಾಕುವ ಕೆಲಸಗಳನ್ನು ಮಾಡಬಾರದು. ಇಂತಹ ಕೃತ್ಯಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದುದು ಎಂದರು.
Also read: ಕಾಂಗ್ರೆಸ್ ಸರ್ಕಾರದಿಂದ ರೈತರ ಬದುಕು ದುಸ್ಥರ | ಬಿ.ವೈ. ವಿಜಯೇಂದ್ರ ಹಿಗ್ಗಾಮುಗ್ಗಾ ವಾಗ್ದಾಳಿ
ಕ್ಯೂಆರ್ ಕೋಡ್ ಹೊಂದಿರುವ ಕೂಪನ್’ಗಳನ್ನು ನಿನ್ನೆ ರಾತ್ರಿ ಹಲವು ಕಡೆಗಳಲ್ಲಿ ಕಾಂಗ್ರೆಸ್ ಪಕ್ಷದವರು ಹಂಚಿದ್ದಾರೆ. ಸುಮಾರು 3-4 ಸಾವಿರ ರೂಪಾಯಿ ಮೌಲ್ಯದ ಕೂಪನ್ ಹಿಡಿದು, ರಾತ್ರೋರಾತ್ರಿ ಜನರ ಮನೆಗಳ ಬಾಗಿಲು ಬಡಿದು, ಒತ್ತಡ ಹಾಕಿರುವುದು ಅಸಹ್ಯಕರವಾದುದು ಎಂದು ಕಿಡಿ ಕಾರಿದರು.
ನಮ್ಮ ಕಾರ್ಯಕರ್ತರು ತಿಂಗಳುಗಳ ಕಾಲ ಬಹಳಷ್ಟು ಶ್ರಮ ವಹಿಸಿದ್ದಾರೆ. ಇದಕ್ಕೆ ತಕ್ಕ ಪ್ರತಿಫಲ ಫಲಿತಾಂಶದ ದಿನ ದೊರೆಯಲಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post