ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಧರ್ನುಮಾಸದ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನ ಎರಡು ರಾಯರ ಮಠಗಳಲ್ಲಿ ವಿಶೇಷ ಪ್ರವಚನ ಮಾಲಿಕೆಯನ್ನು ಏರ್ಪಡಿಸಲಾಗಿದೆ.
ಎನ್ ಆರ್ ಕಾಲೋನಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪ್ರವಚನ ವಿದ್ವಾನ್ ಶ್ರೀ ಅಶೋಕಾಚಾರ್ಯ ವಿ. ಜೋಶಿ ಅವರಿಂದ ಧನುರ್ಮಾಸ ಮಹಾತ್ಮೆ ವಿಷಯದ ಕುರಿತಾಗಿ ನಿನ್ನೆಯಿಂದ ವಿಶೇಷ ಪ್ರವಚನ ಆರಂಭಗೊಂಡಿದ್ದು, ಡಿ.22ರವರೆಗೂ ಪ್ರತಿನಿತ್ಯ ಸಂಜೆ 6.45ರಿಂದ 7.45ರವರೆಗೂ ನಡೆಯಲಿದೆ.
ಇನ್ನು, ಇಟ್ಟಮಡು ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಡಿ.23ರಿಂದ 28ರವರೆಗೂ ಪ್ರತಿದಿನ ಸಂಜೆ 6.30ರಿಂದ 7.30ರವರೆಗೂ ಮಹಾಭಾರತ ತಾತ್ಪರ್ಯ ನಿರ್ಣಯ ಅಧ್ಯಾಯ 1ರ ಕುರಿತಾಗಿ ವಿಶೇಷ ಪ್ರವಚನ ನಡೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















