ಬೆಂಗಳೂರು: ಅಖಿಲ ಭಾರತ ಮಾಧ್ವ ಮಹಾಮಂಡಳದ ವತಿಯಿಂದ ನಡೆಯುತ್ತಿರುವ ಜ್ಞಾನಸತ್ರ-2019ರ ಭಾಗವಾಗಿ ಜೂನ್ 20ರಂದು ಸಂಧ್ಯಾವಂದನೆ-ಅನುಷ್ಠಾನ ಹಾಗೂ ಮಂತ್ರಾರ್ಥ ಚಿಂತನೆ ವಿಶೇಷ ಕಾರ್ಯಕ್ರಮ ನಡೆಯಲಿದೆ.
ಜಯನಗರ 5ನೆಯ ಬ್ಲಾಕ್’ನಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಈ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ವಿದ್ವಾನ್ ಶ್ರೀ ಕೃಷ್ಣರಾಜ ಕುತ್ಪಾಡಿ ಅವರು ನಿರ್ವಹಿಸಲಿದ್ದಾರೆ.
ಅಂದು ಸಂಜೆ 4 ಗಂಟೆಯಿಂದ 6.30ರವರೆಗೂ ನಡೆಯಲಿದ್ದು, ಇದರಲ್ಲಿ ಎಲ್ಲ ವಯಸ್ಸಿನ ವಟುಗಳು ಪಾಲ್ಗೊಳ್ಳಲು ಅವಕಾಶವಿದ್ದು, ಆಸಕ್ತರು ಪಾಲ್ಗೊಳ್ಳಲು ಕೋರಲಾಗಿದೆ.
ಈ ವಿಶೇಷ ಕಾರ್ಯಕ್ರಮದ ಕುರಿತಾಗಿ ಕಲ್ಪ ನ್ಯೂಸ್ ಜೊತೆಯಲ್ಲಿ ಮಾತನಾಡಿದ ಕೃಷ್ಣರಾಜ ಕುತ್ಪಾಡಿ, ವೇದ ನಮ್ಮ ಹಿರಿಯರು ಕಂಡ ಸತ್ಯ. ಕೊಟ್ಟ ತಥ್ಯ. ಅದನ್ನು ಉಳಿಸಿಕೊಂಡು ಮುಂದುವರೆಸಿಕೊಳ್ಳುವ ಹೊಣೆಗಾರಿಕೆ ನಮ್ಮದು ಎನ್ನುತ್ತಾರೆ.
ನಿತ್ಯ ಬಳಕೆಯ ಮಂತ್ರಗಳನ್ನಾದರೂ ತಿಳಿದರೆ ಈ ನೆಲದಲ್ಲಿ ಪುಟ್ಟಿದ್ದು ಸಾರ್ಥಕವೆನಿಸೀತು. ಪ್ರಾಣಾಯಾಮ-ಧ್ಯಾನ ನಮ್ಮ ಪ್ರಾಚೀನರು ನಮ್ಮ ರಕ್ಷಣೆಗಾಗಿ ನೀಡಿದ ಅಸ್ತ್ರಗಳು. ಮಂತ್ರ-ತಂತ್ರಗಳು ನೀಡುವ ರಕ್ಷಣೆ ಅನುಭವಕ್ಕೆ ದಕ್ಕುವಂಥದ್ದು. ಲೋಕದಲ್ಲಿ ಚೆನ್ನಾಗಿ ಬದುಕಲು, ಲೋಕಾತೀತನಲಿ ಮನವ ನೆಲೆಗೊಳಿಸುವ ಸುಲಭ ಮಾರ್ಗ ಸಂಧ್ಯಾವಂದನೆ ಎನ್ನುತ್ತಾರೆ.
ಶುಕ್ರವಾರ ಪ್ಲಾಸ್ಟಿಕ್ ಪ್ರಪಂಚ ನಾಟಕ ಪ್ರದರ್ಶನ
ಜೂನ್ 19ರ ಇಂದು ಪೂರ್ಣಪ್ರಜ್ಞ ವಿದ್ಯಾಪೀಠ ಪಾಠಶಾಲೆಯ ಆವರಣದಲ್ಲಿ ಮಕ್ಕಳಿಗಾಗಿ ‘ಪ್ಲಾಸ್ಟಿಕ್ ಪ್ರಪಂಚ’ ನಾಟಕ ಪ್ರದರ್ಶನ ನಡೆಯಲಿದೆ. ಮಕ್ಕಳಿಗಾಗಿಯೇ ಈ ನಾಟಕ ಪ್ರದರ್ಶನ ನಡೆಯಲಿದ್ದು, ಸಂಜೆ 5.30ರಿಂದ 6 ಗಂಟೆಯವರೆಗೂ ನಡೆಯಲಿದೆ.
Discussion about this post