ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಚಾಮರಾಜನಗರದ ವಿಶ್ವಹಿಂದೂ ಪರಿಷತ್ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಸ್ಕಂದ ರವರು ಬನಶಂಕರಿ ಬೊಂಬೆ ಮನೆಯ ಸಂಗೀತ ಸಂಜೆಯಲ್ಲಿ ಭಾಗವಹಿಸಿ ಅತ್ಯಂತ ಸುಶ್ರಾವ್ಯವಾಗಿ ಮೊಬೈಲ್ ಫೋನ್ ಬಳಸಿ ಕೀಬೋರ್ಡ್ ವಾದನ ಮಾಡಿದರು.
ಬನಶಂಕರಿ ಬೊಂಬೆ ಮನೆಯ ಪೂಜಾ ಮಾತನಾಡಿ, ಮೊಬೈಲ್ ಬಳಸಿ ಕೀಬೋರ್ಡ್ ವಾದನ ಮಾಡುವುದು ಸುಲಭದ ವಿಷಯವಲ್ಲ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಮೊಬೈಲ್ ಬಳಸಿ ಇಷ್ಟು ಅಚ್ಚುಕಟ್ಟಾಗಿ ಕೀಬೋರ್ಡ್ ವಾದನ ಮಾಡುವುದು ಪ್ರೇರಣೆಯಾಗಿದೆ ಎಂದು ಮುಕ್ತ ಕಂಠದಿಂದ ಸ್ಕಂದರವರನ್ನು ಹೊಗಳಿದರು.
ಸ್ಕಂದ ರವರು ಮಾತನಾಡಿ, ಕೊರೋನ ಸಮಯದಲ್ಲಿ ಮೊಬೈಲ್ ಮೂಲಕ ಶಿಕ್ಷಣ ಪಡೆಯುವುದು ಅನಿವಾರ್ಯವಾಯಿತು ತದನಂತರ ಮೊಬೈಲ್ ಬಳಸುವುದು ಸಹಜವಾಗಿಯೇ ರೂಡಿ ಆಯಿತು. ಆದರೆ ಮೊಬೈಲ್ ನಲ್ಲಿ ಪಾಠವನ್ನು ಬಿಟ್ಟು ಉಳಿದ ಸಮಯ ಬೇರೆ ಬೇರೆ ನೋಡಲು ಸಮಯ ವ್ಯರ್ಥವಾಗುತ್ತಿದೆ ಎಂದು ಅರಿವಾಯಿತು. ನನ್ನ ತಾಯಿ ಜ್ಯೋತಿ ಮೊಬೈಲ್ ಅನ್ನು ಕ್ರಿಯಾತ್ಮಕವಾಗಿ ಬಳಸಲು ಸಲಹೆ ನೀಡಿದರು. ಆಗ ಮೊಬೈಲ್ ನಲ್ಲಿ ಕೀಬೋರ್ಡ್ ಕಲಿಯುವುದನ್ನು ಅಭ್ಯಾಸ ಮಾಡಿಕೊಂಡೆ ಎರಡು ವರ್ಷದ ನಿರಂತರ ಪ್ರಯತ್ನದಿಂದ ಈಗ ಹಲವಾರು ಹಾಡುಗಳನ್ನು ನಿರಾಯಾಸವಾಗಿ ಮೊಬೈಲ್ ಮೂಲಕ ಕೀಬೋರ್ಡ್ ವಾದನ ಮಾಡುತ್ತೇನೆ. ದೇಶ ಭಕ್ತಿಗೀತೆ, ಭಾವಗೀತೆ, ದೇವರ ನಾಮಗಳಿಗೆ ಕೀಬೋರ್ಡ್ ವಾದನ ಮಾಡುವುದು ನನ್ನ ಆಸಕ್ತಿಯಾಗಿದೆ ಎಂದು ತಿಳಿಸಿದರು.
Also read: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಯಶಸ್ವಿ ಬೈಪಾಸ್ ಶಸ್ತ್ರಚಿಕಿತ್ಸೆ
ಈ ಸಂದರ್ಭದಲ್ಲಿ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ಅಧ್ಯಕ್ಷ ಗಣೇಶ್ ಮಾತನಾಡಿ, ಸ್ಕಂದ ರವರು ನಮಗೆ ಮಾದರಿಯಾಗಿದ್ದಾರೆ, ಮಕ್ಕಳಿಗೆ ಮೊಬೈಲ್ ಕೊಟ್ಟು ಪೋಷಕರು ರೀಲ್ಸ್ ನೋಡಲು, ಗೇಮ್ ಆಡಲು ಹೇಳುತ್ತಾರೆ ಆದರೆ ಅದೇ ಮೊಬೈಲ್ ಬಳಸಿ ಕೀಬೋರ್ಡ್ ವಾದನದಂತಹ ಸಂಗೀತ ಕಲೆ ಕಲಿಯುವುದು ಸುಲಭವಲ್ಲ ಅಂತಹ ವಿದ್ಯೆಯನ್ನು ಚಿಕ್ಕವಯಸ್ಸಿನಲ್ಲೇ ಕಲಿತಿರುವುವ ಸ್ಕಂದ ಹಲವು ವಿದ್ಯಾರ್ಥಿಗಳಿಗೆ ಪ್ರೇರಣೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ಕಂದರವರ ಪೋಷಕರಾದ ಕೆ.ಆರ್. ಮಂಜು, ಜ್ಯೋತಿ, ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಗಣೇಶ್, ವಿದ್ಯಾಸ್ಪಂದನ ಸಂಸ್ಥಾಪಕ ಅಧ್ಯಕ್ಷರಾದ ಪುನೀತ್, ಬನಶಂಕರಿ ಬೊಂಬೆ ಮನೆಯ ಪೂಜಾ, ಪೃಥು ಪಿ. ಅದ್ವೈತ್, ಸುಧಾ ಪ್ರಕಾಶ್, ನಿರಂಜನ್, ರಾಧಾ, ಲಕ್ಷ್ಮೀ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post