ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಖ್ಯಾತ ನಟ ಪ್ರಕಾಶ್ ರಾಜ್ ರೈ ಅವರು ತ್ರಿವೇಣಿ ಸಂಗಮದಲ್ಲಿ #Prakash Raj in Triveni Sangama ಮಿಂದೆದ್ದರು ಎಂಬ ಫೋಟೋ ವೈರಲ್ ಆಗುತ್ತಿದ್ದು ಫ್ಯಾಕ್ಟ್ ಚೆಕ್ # ಮಾಡಿದಾಗ ಇದರ ಸತ್ಯಾಸತ್ಯತೆ ಬಯಲಾಗಿದೆ.
ಹೌದು.. ಇದೊಂದು ಸುಳ್ಳು ಸುದ್ಧಿಯಾಗಿದ್ದು, ಸ್ವತಃ ಪ್ರಕಾಶ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸುಳ್ಳ ರಾಜನ ಹೇಡಿಗಳ ಸೈನ್ಯಕ್ಕೆ .. ಅವರ ಪವಿತ್ರ ಪೂಜೆಯಲ್ಲೂ ಸುಳ್ಳು ಸುದ್ದಿ ಹಬ್ಬಿಸಿ ಹೊಲಸು ಮಾಡುವುದೇ ಕೆಲಸ .. ಪೊಲೀಸ್ ದೂರು ದಾಖಲಾಗಿದೆ .. ಕೋರ್ಟಿನ ಕಟಕಟೆಯಲ್ಲಿ ಏನು ಮಾಡುತ್ತಾರೋ ನೋಡೋಣ ಎಂದು ತಮ್ಮ ಅಭಿಪ್ರಾಯವನ್ನು ಪೋಸ್ಟ್ ಮಾಡಿದ್ದಾರೆ.
Also read: ಗಮನಿಸಿ | ಜ.30ರಂದು ಶಿವಮೊಗ್ಗ ನಗರದ ಈ ಕೆಳಗಿನ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

ಅಲ್ಲದೆ ಅನೇಕ ಮಂದಿ ಈ ಫೋಟೋ ಹಂಚಿಕೊಂಡು ಬೇಕಾಬಿಟ್ಟಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಈ ಪೋಸ್ಟ್ ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಇದು ಸುಳ್ಳುಸುದ್ದಿಯಾಗಿದ್ದು, ನಿಮ್ಮಂತಹವರೇ ಹಂಚಿಕೊಂಡರೇ ಹೇಗೆ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ಸಿಕ್ಕ ಅವಕಾಶವನ್ನು ಬಿಡಬಾರದು ಎಂದು ಪ್ರಕಾಶ್ ರೈ ಅವರನ್ನು ನಿಂದಿಸಿದ್ದಾರೆ. ಎಡಪಂಥವನ್ನು ಪ್ರಚಾರ ಮಾಡುವ ಪ್ರಕಾಶ್ ಗೆ ಅಲ್ಲಿ ಏನು ಕೆಲಸ ಎಂದು ಕೆಲವರು ನಿಂದಿಸಿದ್ದಾರೆ. ಇನ್ನೂ ಕೆಲವರು ಇದು ಕೃತಕ ಬುದ್ದಿಮತ್ತೆ ಫೋಟೋ ಎಂದು ಹೇಳಿದ್ದರೆ ಇನ್ನೂ ಕೆಲವರು ಇದು ಯಾವುದೋ ಸಿನಿಮಾ ದೃಶ್ಯದ ಭಾವಚಿತ್ರ ಇರಬೇಕು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಪ್ರಕಾಶ್ ಅಲ್ಲಿಗೆ ಹೋಗುವ ಚಾನ್ಸ್ ಇಲ್ಲವೇ ಇಲ್ಲ. ಅಲ್ಲಿಗೆ ಹೋಗಿಯೇ ಇಲ್ಲ ಎಂದೂ ಕೆಲವರು ಖಡಾಖಂಡಿತವಾಗಿ ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








Discussion about this post