ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಸೆಪ್ಟೆಂಬರ್ 17 ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀ ಅವರ ಜನ್ಮದಿನವಾಗಿದ್ದು, ಅದನ್ನು ಅರ್ಥಪೂರ್ಣವಾಗಿ ದೇಶದಾದ್ಯಂತ ಆಚರಿಸಲು ಭಾರತೀಯ ಜನತಾ ಪಕ್ಷ ತೀರ್ಮಾನಿದ್ದು, ಸೆ.17 ರಿಂದ ಅಕ್ಟೋಬರ್ 7ರವರೆಗೆ ಒಟ್ಟು 20 ದಿನಗಳ ಕಾಲ ಆಚರಿಸಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ (ಬೈರತಿ) ಅವರು ತಿಳಿಸಿದರು.
ವಿಧಾನ ಸೌಧದ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಬಸವರಾಜ ಅವರು ಬಡವರ, ದಲಿತರ, ರೈತರ, ಶ್ರಮಿಕರ ಮಹಿಳೆಯರ ಪರ ಧ್ವನಿಯಾಗಿರುವ ನಮ್ಮ ಪ್ರಧಾನ ಮಂತ್ರಿಗಳು ಅವರ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ ಎಂದರು.
ನರೇಂದ್ರ ಮೋದಿಯವರ ಅಧಿಕಾರತ್ವದಲ್ಲಿ ರೂಪಿಸಿರುವ ಜನಪರ ಯೋಜನೆಗಳ ಬಗ್ಗೆ ತಿಳಿಸುವ ಸಲುವಾಗಿ ಅಕ್ಟೋಬರ್ 7 ವರೆಗೆ ಸುಧೀರ್ಘ 20 ದಿನಗಳ ಕಾಲದ ಸೇವೆ ಹಾಗೂ ಸಮರ್ಪಣಾ ಅಭಿಯಾನ ಇದಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯರು ಹಾಗೂ ಭಾರತೀಯ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಅಭಿಯಾನದ ನಡೆಯುವ ಬಗ್ಗೆ ವಿವರಣೆ ನೀಡಿದರು.
ಶಾಸಕ ಸಂಜೀವ ಮಟಂದೂರ್, ಲಾಲ್ ಜೀ ಮೆಂಡನ್, ರಾಜ್ಯ ಬಿಜೆಪಿ ಮಾಧ್ಯಮ ವಿಭಾಗದ ಮುಖ್ಯಸ್ಥರಾದ ಕರುಣಾಕರ ಖಾಸಲೆ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post