ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದ್ವಿತೀಯ ಪಿಯುಸಿ ಫಲತಾಂಶದಲ್ಲಿ Second PU Result ರಾಜ್ಯಕ್ಕೆ ಮೂರನೆಯ ರ‍್ಯಾಂಕ್ ಗಳಿಸುವ ಮೂಲಕ ರಾಜ್ಯ ರಾಜಧಾನಿಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಎಂ. ಶುಭಶ್ರೀ ಸಾಧನೆ ಮಾಡಿದ್ದಾರೆ.
ಆರ್.ಎಸ್. ಮಧುಸೂಧನ್-ಆರ್. ಪಲ್ಲವಿ ದಂಪತಿಗಳ ಪುತ್ರಿಯಾದ ಶುಭಶ್ರೀ 600ಕ್ಕೆ 595 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಮೂರನೆಯ ರ‍್ಯಾಂಕ್ ಪಡೆಯುವ ಮೂಲಕ ಪೋಷಕರಿಗೆ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಸಂಸ್ಕೃತ, ಬ್ಯುಸಿನೆಸ್ ಸ್ಟಡೀಸ್, ಅಕೌಂಟೆನ್ಸಿ, ಸ್ಟಾಟಿಸ್ಟಿಕ್ಸ್ ಹಾಗೂ ಬೇಸಿಕ್ ಮ್ಯಾಥಮೆಟಿಕ್ಸ್ ವಿಷಯಗಳಲ್ಲಿ ಪ್ರತಿ ಪತ್ರಿಕೆಯಲ್ಲೂ 100ಕ್ಕೆ 100 ಅಂಕ ಗಳಿಸಿರುವ ಶುಭಶ್ರೀ ಇಂಗ್ಲಿಷ್ ಭಾಷೆಯಲ್ಲಿ 100ಕ್ಕೆ 95 ಅಂಕಗಳನ್ನು ಗಳಿಸಿದ್ದಾರೆ.
ಈಕೆ ರಾಜಾಜಿನಗರದ ಎಎಸ್’ಸಿ ಸ್ವತಂತ್ರ ಪಿಯು ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ.
ಈ ಪ್ರತಿಭಾನ್ವಿತ ವಿದ್ಯಾರ್ಥಿನಿಗೆ, ಈಕೆಯ ಪೋಷಕರಿಗೆ ಹಾಗೂ ಕಾಲೇಜು ಆಡಳಿತ ಮಂಡಳಿ, ಬೋಧಕ, ಬೋಧಕೇತರ ಸಿಬ್ಬಂದಿಗಳಿಗೆ ಕಲ್ಪ ಮೀಡಿಯಾ ಹೌಸ್(ರಿ.) ಅಭಿನಂದಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post