ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪುನೀತ್ ರಾಜಕುಮಾರ್ ರವರಿಗೆ Puneeth Rajkumar ಇಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಸಂಪೂರ್ಣ ಕರ್ನಾಟಕವೇ ಈ ದಿನವನ್ನು ಸಂಭ್ರಮಿಸುತ್ತಿರುವುದು ಪುನೀತ್ ಅವರಿಗಿದ್ದ ಜನಪ್ರಿಯತೆಯ ದ್ಯೋತಕವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ಹೇಳಿದರು.
ವಿಧಾನಸೌಧದ ಆವರಣದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪುನೀತ್ ರಾಜ್‌ಕುಮಾರ್ ಜನರ ಮನಸ್ಸಿನಲ್ಲಿದ್ದಾರೆ, ಕನ್ನಡಿಗರಲ್ಲಿದ್ದಾರೆ, ನಮ್ಮ ಭಾಷೆಯಲ್ಲಿದ್ದಾರೆ, ಹೃದಯದಲ್ಲಿದ್ದಾರೆ. ಮರಳಿ ಕೆಳಗೆ ಬಂದು ನೋಡಿ ಪುನೀತ್ ರಾಜ್‌ಕುಮಾರ್ ಅವರೇ ಲಕ್ಷಾಂತರ ಅಭಿಮಾನಿಗಳು ನಿಮ್ಮನ್ನು ಆರಾಧಿಸುತ್ತಿದ್ದಾರೆ. ಪುನೀತ್ ರಾಜಕುಮಾರ್ ಮತ್ತೊಮ್ಮೆ ಈ ನಾಡಿನಲ್ಲಿ ಹುಟ್ಟಿ ಬನ್ನಿ ಎಂದರು.












Discussion about this post